ಮಂಡ್ಯ: ಸಕ್ಕರೆ ನಾಡು ಮಂಡ್ಯದಲ್ಲಿ ಇಂದಿನಿಂದ ಮೂರು ದಿನಗಳ ಕಾಲ 87 ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ.ಸಮ್ಮೇಳನದಲ್ಲಿ ನಾಡಪ್ರಭು ಕಂಪೇಗೌಡರ ವೇಷಭೂಷಣ ಧರಿಸಿ ಕುದುರೆ ಏರಿ ಸವಾರಿ ಮಾಡುವ ಮೂಲಕ ವ್ಯಕ್ತಿಯೊಬ್ಬರು ಗಮನ ಸೆಳೆದರು.
ಆಲಗೂಡು ತಾಲ್ಲೂಕಿನ ನಂದಿಪುರ ಗ್ರಾಮದ ಎನ್.ಕೆ. ಕುಮಾರ್ ಎಂಬುವವರು ಥೇಟ್ ಕೆಂಪೇಗೌಡರಂತೆ ಮೀಸೆ, ಮೈಸೂರು ಪೇಟಾದೊಂದಿಗೆ ಜುಬ್ಬ-ಪೈಜಾಮ ಹಾಕಿ ಬಿಳಿ ಕುದುರೆ ಏರಿ ಸವಾರಿ ಮಾಡುವ ಮೂಲಕ ಗಮನ ಸೆಳೆದರು.
ನುಡಿ ಜಾತ್ರೆಗೆ ಬಂದವರು ಕೆಂಪೇಗೌಡ ವೇಷಧಾರಿಯ ಎದುರು ನಿಂತು ಸೆಲ್ಫಿ ತೆಗೆದುಕೊಂಡರು. ಶಾಲೆಯ ಮಕ್ಕಳು ಕೂಡ ತಮ್ಮ ಶಿಕ್ಷಕರ ಮೊಬೈಲ್‌ನಲ್ಲಿ ಪೋಟೋ ತೆಗೆದರು. ದಾರಿ ಉದ್ದಕ್ಕೂ ಕನ್ನಡ ಪ್ರೇಮಿಗಳು ಕೂಡ ಇವರನ್ನುಮಾತನಾಡಿಸಿ ಪೋಟೋ ತೆಗೆದುಕೊಂಡರು.





