Mysore
19
broken clouds

Social Media

ಸೋಮವಾರ, 26 ಜನವರಿ 2026
Light
Dark

ಮದ್ದೂರು| ಹಣಕಾಸು ವಿಚಾರದಲ್ಲಿ ಕಲಹ: ವ್ಯಕ್ತಿಯ ಕುತ್ತಿಗೆ ಸೀಳಿ ಬರ್ಬರ ಹತ್ಯೆ

ಮಂಡ್ಯ: ಹಣಕಾಸು ವಿಚಾರದದಲ್ಲಿ ಕಲಹ ಏರ್ಪಟ್ಟ ಪರಿಣಾಮ ವ್ಯಕ್ತಿಯೊಬ್ಬನ ಕುತ್ತಿಗೆ ಸೀಳಿ ಬರ್ಬರವಾಗಿ ಹತ್ಯೆಗ್ಯೆದಿರುವ ಘಟನೆ ಮದ್ದೂರು ತಾಲ್ಲೂಕಿನ ಕೆ.ಎಂ.ದೊಡ್ಡಿ ಸಮೀಪದ ಲಕ್ಷ್ಮೇಗೌಡನದೊಡ್ಡಿಯಲ್ಲಿ ನಡೆದಿದೆ.

ಹಣಕಾಸು ವಿಚಾರವಾಗಿ ಮೂವರ ಗುಂಪು ಗ್ರಾಮದ ಎಲ್.ಕೃಷ್ಣೇಗೌಡ (47) ಎಂಬಾತನನ್ನು ಕೊಲೆಗೈದು ಪರಾರಿಯಾಗಿದೆ.

ಮದನಹಟ್ಟಿ ದೇವಾಲಯದ ಬಳಿ ಕೃಷ್ಣೇಗೌಡರ ಮೇಲೆ ಮಾರಕಾಸ್ತ್ರದಿಂದ ದಾಳಿ ಮಾಡಿ ದುಷ್ಕೃತ್ಯ ಎಸಗಿದ್ದು, ಬೆಳ್ಳಂಬೆಳಗ್ಗೆ ಹರಿದ ನೆತ್ತರಿಗೆ ಗ್ರಾಮದ ಜನತೆ ಬೆಚ್ಚಿ ಬಿದ್ದಿದ್ದಾರೆ. ಮಂಗಳವಾರ ಮುಂಜಾನೆ ಎಂದಿನಂತೆ ಡೈರಿಗೆ ತೆರಳಿ ಹಾಲು ಹಾಕಿ ಮನೆಗೆ ಬರುತ್ತಿದ್ದ ಕೃಷ್ಣೇಗೌಡ ತೋಟದ ಬಳಿ ಎಮ್ಮೆ ಕರು ಕಟ್ಟುತ್ತಿದ್ದಾಗ ಪ್ಲಾಟಿನಂ ಬೈಕಿನಲ್ಲಿ ಬಂದ ಮೂವರು ಏಕಾಏಕಿ ಮುಗಿಬಿದ್ದು, ಹೊಟ್ಟೆಗೆ ಇರಿದಿದ್ದಾರೆ. ತೀವ್ರ ರಕ್ತಸ್ರಾವದಿಂದ ಕೆಳಕ್ಕೆ ಬಿದ್ದ ಕೃಷ್ಣೇಗೌಡರ ಕುತ್ತಿಗೆ ಕೊಯ್ದು ಹತ್ಯೆ ಮಾಡಿ ಪರಾರಿಯಾಗಿದ್ದಾರೆ.

ಹಣಕಾಸು ವಿಚಾರವಾಗಿ ದುಷ್ಕೃತ್ಯ ನಡೆದಿದೆ ಎಂದು ಶಂಕಿಸಲಾಗಿದ್ದು, ಸ್ಥಳಕ್ಕೆ ಕೆ.ಎಂ.ದೊಡ್ಡಿ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತ ದೇಹವನ್ನು ಆಸ್ಪತ್ರೆಗೆ ಸ್ಥಳಾಂತರಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಸಂಬಂಧ ಕೆ.ಎಂ.ದೊಡ್ಡ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ಹತ್ಯೆಯಾದ ಕೃಷ್ಣೆಗೌಡರಿಗೆ ಇಬ್ಬರು ಮಕ್ಕಳು, ಪತ್ನಿ ಹಾಗೂ ತಾಯಿ ಇದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.

Tags:
error: Content is protected !!