ಮಂಡ್ಯ: ಇತ್ತೀಚೆಗೆ ನವದೆಹಲಿಯಲ್ಲಿ ನಡೆದ ಮಿಸೆಸ್ ಇಂಡಿಯಾ ಪ್ರೈಡ್ ಆಫ್ ನೇಷನ್-2024 ಆವಾರ್ಡ್ ಅನ್ನು ಮದ್ದೂರು ತಾಲ್ಲೂಕಿನ ಡಾ.ಪ್ರಿಯಾ ಗೋಸ್ವಾಮಿ ಅವರು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.
ನವದೆಹಲಿಯಲ್ಲಿ ಐದು ದಿನಗಳ ನಡೆದ ಸೌಂದರ್ಯ ಸ್ಪರ್ಧೆಯಲ್ಲಿ ಪ್ರಿಯಾ ಅವರು ಎನ್‌ಚಾಂಟಿಂಗ್ ವಿಭಾಗದ ಕಿರೀಟವನ್ನು ಪಡೆದಿದ್ದಾರೆ. ಅಲ್ಲದೇ ಇದೇ ವೇದಿಕೆಯಲ್ಲಿ ಸೋಷಿಯಲ್ ಮೀಡಿಯಾ ಇನ್‌ಫ್ಲುಯೆನ್ಸ್‌ರ್ ಎಂಬ ಗೌರವಕ್ಕೂ ಭಾಜನರಾಗಿದ್ದಾರೆ.
ಡಾ.ಪ್ರಿಯಾ ಅವರು ವೃತ್ತಿಯಲ್ಲಿ ಪಶು ವೈದ್ಯರಾಗಿದ್ದು, ಮೂಲತಃ ಪಂಜಾಬ್ ಮೂಲದವರಾಗಿದ್ದಾರೆ. ಇವರು ಗೋವಾದಲ್ಲಿ ಬೆಳೆದಿದ್ದು, ಮದ್ದೂರಿನ ನಿವೃತ್ತ ಪ್ರಾಧ್ಯಾಪಕ ಪ್ರೊ.ಸಿದ್ದರಾಜು ಅವರ ಪುತ್ರ ಸಂಜಿತ್ ಅವರನ್ನು ವರಿಸಿದ್ದಾರೆ. ಸಂಜೀತ್ ಅವರು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದು, ಪ್ರಸ್ತುತ ಉತ್ತರಾಖಂಡ್‌ನಲ್ಲಿ ಡೆಪ್ಯೂಟಿ ಕಮಾಂಡೆಂಟ್ ಆಗಿದ್ದಾರೆ ಎಂದು ಕುಟುಂಬ ವರ್ಗದವರು ಮಾಹಿತಿ ನೀಡಿದ್ದಾರೆ.





