ಮಂಡ್ಯ: ಮದ್ದೂರು ತಾಲೂಕಿನ ಗೋಪನಹಳ್ಳಿ ಗ್ರಾಮದ ಶ್ರೀ ಚೌಡೇಶ್ವರಿ ದೇವಾಲಯದ ಉದ್ಘಾಟನೆ, ವಿಗ್ರಹ ಪುನಃ ಪ್ರತಿಷ್ಠಾಪನೆ ಹಾಗೂ ಮಹಾಕುಂಭಾಭಿಷೇಕ ಮಹೋತ್ಸವನ್ನು ಫೆಬ್ರವರಿ ೦೧ ಮತ್ತು ೦೨ರಂದು ಹಮ್ಮಿಕೊಳ್ಳಲಾಗಿದೆ ಎಂದು ಗ್ರಾಮದ ಕೆಂಪರಾಜು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಫೆ.೦೧ರಂದು ದೇವಾಲಯದಲ್ಲಿ ವಿಗ್ರಹ ಪುನಃ ಪ್ರತಿಷ್ಠಾಪನೆ ಹಾಗೂ ಮಹಾಕುಂಭಾಭಿಷೇಕ ಮಹೋತ್ಸವ ಸೇರಿದಂತೆ ದೇವಾಲಯದಲ್ಲಿನ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ ಎಂದರು.
ಫೆಬ್ರವರಿ ೦೨ರಂದು ಮಧ್ಯಾಹ್ನ ೦೩ಕ್ಕೆ ದೇವಾಲಯದ ಉದ್ಘಾಟನೆಯಾಗಲಿದ್ದು, ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ದಿವ್ರ ಸಾನಿಧ್ಯದಲ್ಲಿ ವಿಶ್ವ ಒಕ್ಕಲಿಗ ಮಹಾಸಂಸ್ಥಾನ ಮಠದ ಡಾ.ನಿಶ್ಚಲಾನಂದನಾಥ ಸ್ವಾಮೀಜಿ ಕಳಸ ಸ್ಥಾಪಿಸುವರು. ಆದಿಚುಂಚನಗರಿ ಶಾಖಾ ಮಠ ವಿಶ್ವ ಮಾನವ ಕ್ಷೇತ್ರ ಕಾರ್ಯದರ್ಶಿ ಪುರುಷೋತ್ತಮಾನಂದನಾಥ ಸ್ವಾಮೀಜಿ ಮೂಲ ದೇವರ ಪ್ರತಿಷ್ಠಾಪನೆ ಮಾಡಲಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮವನ್ನು ಕೇಂದ್ರ ಉಕ್ಕು ಮತತು ಬೃಹತ್ ಕೈಗಾರಿಕಾ ಸಚಿವ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಕೃಷಿ ಮತ್ತು ಮಂಡ್ಯ ಜಿಲ್ಲಾ ಉಸ್ತುವಾರಿ ಸಚವಿ ಎನ್.ಚಲುವರಾಯಸ್ವಾಮಿ ಉದ್ಘಾಟಿಸಲಿದ್ದು, ಶಾಸಕ ಕೆ.ಎಂ.ಉದಯ್ ಅಧ್ಯಕ್ಷತೆ ವಹಿಸುವರು.
ಮಾಜಿ ಸಚಿವ ಡಿ.ಸಿ.ತಮ್ಮಣ್ಣ ವಿಗ್ರಹ ಶಿಲ್ಪಿ, ದೇವಸ್ಥಾನ ನಿರ್ಮಾಣ ಶಿಲ್ಪಿ, ರಾಜಗೋಪುರ ನಿರ್ಮಾಣ, ಯಾತ್ರಿಕರ ತಂಗುದಾಣ ನಿರ್ಮಾಣ, ಕಲ್ಯಾಣಿ ನಿರ್ಮಾಣ ಸೇವಾರ್ಥಿಗಳನ್ನು ಸನ್ಮಾನಿಸುವರು. ಮುಕ್ಯ ಅತಿಥಿಗಳಾಗಿ ಶಾಸಕರಾದ ರಮೇಶ್ ಬಂಡಿಸಿದ್ದೇಗೌಡ, ಮಧು ಜಿ.ಮಾದೇಗೌಡ, ದಿನೇಶ್ ಗೂಳಿಗೌಡ, ವಿವೇಕಾನಂದ.ಕೆ, ರವಿಕುಮಾರ್‌ಗೌಡ, ಮನ್‌ಮುಲ್ ಮಾಜಿ ನಿರ್ದೇಶಕ ಎಸ್.ಪಿ.ಸ್ವಾಮಿ ಇತರರು ಭಾಗವಿಸಲಿದ್ದಾರೆ ಎಂದು ವಿವರಿಸಿದರು.





