Mysore
20
broken clouds

Social Media

ಮಂಗಳವಾರ, 13 ಜನವರಿ 2026
Light
Dark

ಮಹಿಳೆ ದಿನಾಚರಣೆಗಳು ಆತ್ಮಾವಲೋಕನದ ವೇದಿಕೆಗಳಾಗಲಿ ; ಜಿಲ್ಲಾಧಿಕಾರಿ ಕುಮಾರ

ಮಂಡ್ಯ : ಮಹಿಳೆ ಸಮಾಜದ ಶಕ್ತಿ.  ಹೀಗಿದ್ದರು ಸೂಪರ್ ಮೆನ್ ಎಂದು ಹೇಳುತ್ತಾರೆ ವಿನಹಃ ಸೂಪರ್ ವುಮೆನ್ ಎಂಬ ಪದ ಹೇಳಲು ಸಮಾಜ ತಯಾರಿಲ್ಲ, ಹೀಗಾಗಿ ಮಹಿಳಾ ದಿನಾಚರಣೆಗಳು ಆತ್ಮವಲೋಕಲನದ ವೇದಿಕೆಗಳಾಗಬೇಕು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಅಭಿಪ್ರಾಯಪಟ್ಟರು.

ಶನಿವಾರ ಕಲಾಮಂದಿರದಲ್ಲಿ ಆಯೋಜಿಸಲಾಗಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮಹಿಳೆಯರ ಅಭಿವೃದ್ಧಿಗೆ ಬೆಂಬಲ ನೀಡಿದರೆ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯ. ಹೀಗಾಗಿ ಮಹಿಳೆಯರಿಗೆ ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯ ಕ್ಷೇತ್ರಗಳಲ್ಲಿ ಸಮಾನ ಅವಕಾಶ ಒದಗಿಸಬೇಕು  ಎಂದು ಹೇಳಿದರು.

ಹೆಣ್ಣಿಲ್ಲದೆ ಜೀವ ಮತ್ತು ಜೀವನವಿಲ್ಲ ಮಹಿಳೆ ಪ್ರಪಂಚದ ದೊಡ್ಡ ಶಕ್ತಿ. ಮಹಿಳೆಗೆ ಇನ್ನೊಂದು ಜೀವಕ್ಕೆ ಜನ್ಮ ನೀಡುವ ಶಕ್ತಿ ಹಾಗೂ ಇಡೀ ಕುಟುಂಬವನ್ನು ನಿರ್ವಹಿಸುವ ಶಕ್ತಿ ಇದೆ ಎಂದರು.

ಸ್ವಾಮಿ ವಿವೇಕನಂದರು ಮಹಿಳೆಯರಿಗೆ ಅಂತರಿಕವಾಗಿ ಮಹಾಶಕ್ತಿ ಇದೆ. ಪುರುಷರು ಮಹಿಳೆಯರ ಶಕ್ತಿ ಕುಂದಿಸದೆ ಇದ್ದರೆ ಸಾಕು. ಮಹಿಳೆ ತನಾಗಿಯೇ ಸಮಾಜದಲ್ಲಿ ಬೆಳೆಯುತ್ತಾಳೆ ಎಂದು ಹೇಳಿದ್ದಾರೆ ಅದನ್ನು ಪಾಲಿಸೋಣ ಎಂದು ಕರೆ ನೀಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಮಾತನಾಡಿ, ಸ್ವಾತಂತ್ರ್ಯಕ್ಕೂ ಹಿಂದೆ ಮಹಿಳೆಯರು ಕೇವಲ ಮನೆಯ ಕೆಲಸಕ್ಕೆ ಮಾತ್ರ ಸೀಮಿತವಾಗಿದ್ದರು. ಆದರೆ ಇಂದು ಅಟೋರಿಕ್ಷಾ ದಿಂದ ಅಂತರಿಕ್ಷಾ ತಲುಪುವ ರಾಕೆಟ್ ನ್ನು ಉಡಾವಣೆ ಮಾಡುವ ಮಟ್ಟಕ್ಕೆ ಬೆಳೆದು ನಿಂತಿದ್ದಾರೆ. ಇದು ಮಹಿಳೆಯರಲ್ಲಿ ಎಂತಹ ಅಭೂತಪೂರ್ವ ಆತ್ಮವಿಶ್ವಾಸ ಮತ್ತು ಶ್ರದ್ಧೆ ಇದೆ ಎಂಬುದನ್ನು ಎತ್ತಿ ತೋರುತ್ತದೆ ಎಂದು ತಿಳಿಸಿದರು.

ಮಹಿಳೆಯರ ರಕ್ಷಣೆ ಹಾಗೂ ಹಕ್ಕುಗಳನ್ನು ಕಪಾಡಲು ಹಲವಾರು ಬಲಿಷ್ಠ ಕಾನೂನುಗಳನ್ನು ಬಿ.ಎನ್ ಎಸ್ ಕಾಯಿದೆ ಯಲ್ಲಿ ತರಲಾಗಿದೆ‌ ಮಹಿಳೆಯರು ತಮ್ಮ ವಿರುದ್ಧ ಅನ್ಯಾಯ ನೇದಾಗ ದೈರ್ಯವಾಗಿ ದನಿ ಎತ್ತಬೇಕು ಎಂದರು.

ಇಂದಿನ ಸಮಾಜದಲ್ಲಿ ಸಮಾಜಿಕ ಮಾಧ್ಯಮಗಳಲ್ಲಿ ಮಹಿಳೆಯರನ್ನು ತೇಜೋವದೆ ಮಾಡಿ ಗೌರವಕ್ಕೆ ದಕ್ಕೆ ತರುತ್ತಾರೆ. ಇವುಗಳ ವಿರುದ್ಧವು ಗಟ್ಟಿಯಾಗಿ ಹೋರಾಟ ಮಾಡುವ ದಿಟ್ಟತನವನ್ನು ಮಹಿಳೆಯರು ಬೆಳಸಿಕೊಳ್ಳಬೇಕಿದೆ ಎಂದರು.

ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ರಾಜ ಮೂರ್ತಿ, ಆಯುಷ್ ಇಲಾಖೆಯ ಹಿರಿಯ ವೈದ್ಯಧಿಕಾರಿ ಬಿ. ಎಸ್ ಸೀತಾಲಕ್ಷ್ಮಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿ ಪುಷ್ಪ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಮಂಜುಳ, ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕರಾದ ರೂಪಶ್ರೀ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಮಧುಶ್ರೀ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶರಾದ ಎಸ್ ಹೆಚ್ ನಿರ್ಮಲ  ಸೇರಿದಂತೆ ಇತರರು  ಉಪಸ್ಥಿತರಿದ್ದರು.

Tags:
error: Content is protected !!