Mysore
26
clear sky

Social Media

ಸೋಮವಾರ, 08 ಡಿಸೆಂಬರ್ 2025
Light
Dark

ಬಿಜೆಪಿ ಸಂಸದರು ಕೆಆರ್‌ಎಸ್‌ ವೀಕ್ಷಣೆ ಬಿಟ್ಟು ಕೇಂದ್ರದ ಮೇಲೆ ಒತ್ತಡ ಹೇರಲಿ: ಚಲುವರಾಯಸ್ವಾಮಿ

ಮಂಡ್ಯ: ರಾಜ್ಯದ ಬಿಜೆಪಿ ಸಂಸದರು, ಕೆಆರ್’ಎಸ್ ವೀಕ್ಷಣೆ ಮಾಡುವುದನ್ನು ಬಿಟ್ಟು ದೆಹಲಿಗೆ ಹೋಗಿ, ಕಾವೇರಿ ನದಿ ನೀರು ಪ್ರಾಧಿಕಾರಕ್ಕೆ ವಸ್ತುಸ್ಥಿತಿ ಮನವರಿಕೆ ಮಾಡಿಕೊಟ್ಟು ಒತ್ತಡ ಹಾಕಲಿ ಎಂದು ಕೃಷಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚೆಲುವರಾಯಸ್ವಾಮಿ ತಿರುಗೇಟು ನೀಡಿದರು.

ಮದ್ದೂರು ತಾಲೂಕಿನ ಕೊಪ್ಪದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಪಕ್ಷದ 25 ಸಂಸದರು ಎಲ್ಲಿ ಹೋದರು ? ಅಧಿಕಾರದಿಂದ ಕೆಳಗಿಳಿಯುವುದಕ್ಕೆ 4 ತಿಂಗಳು ಬಾಕಿ ಇರುವಾಗ ಇವರಿಗೆ ರೈತರ ಬಗ್ಗೆ ಕಾಳಜಿ ಬಂದಿದೆಯೇ? ನಮ್ಮ ಸರ್ಕಾರ ನ್ಯಾಯಾಲಯಕ್ಕೆ ಅರ್ಜಿ ಹಾಕಿ ವಾಸ್ತವ ಸ್ಥಿತಿಯ ಬಗ್ಗೆ ಮನವರಿಕೆ ಮಾಡಿಕೊಟ್ಟು ಹೋರಾಟ ಮಾಡುತ್ತಿದ್ದೇವೆ, ಕುಡಿಯುವ ನೀರು ಉಳಿಸಿಕೊಳ್ಳಲು ಸತತ ಪ್ರಯತ್ನ ಮಾಡುತ್ತಿದ್ದೇವೆ, ರೈತರನ್ನು ಸಂಕಷ್ಟದಿಂದ ಪಾರು ಮಾಡಬೇಕು,

ಬಿಜೆಪಿ ಸಂಸದರು ಕೃಷ್ಣರಾಜಸಾಗರ ವೀಕ್ಷಣೆ ಮಾಡೋದು. ದೆಹಲಿಗೆ ಹೋಗಿ ಮಾಡಬೇಕು, ಅದು ಸರ್ಕಾರದ ಕರ್ತವ್ಯ, ಖಂಡಿತ ಮಾಡುತ್ತೇವೆ, ಈ ಮದ್ಯೆ ಬಿಜೆಪಿ ಪಕ್ಷದವರು ರಾಜಕಾರಣ ಮಾಡುವುದು ಸರಿಯಲ್ಲ ಎಂದರು.

ಬಿಜೆಪಿ ಸಂಸದರು ಕೃಷ್ಣರಾಜಸಾಗರ ವೀಕ್ಷಣೆ ಮಾಡೋದು ಬಿಟ್ಟು, ದೆಹಲಿಗೆ ಹೋಗಿ ಪ್ರಧಾನಮಂತ್ರಿಗೆ ಒತ್ತಡ ಹಾಕುವುದು ಒಳ್ಳೆಯದು, ಕಾವೇರಿ ವಿಚಾರದಲ್ಲಿ ಅವರು ರಾಜಕಾರಣ ಮಾಡುವುದು ಬೇಡ ಎಂದರು.

ಲೋಕಸಭಾ ಚುನಾವಣೆಗೆ ಬಿಜೆಪಿ -ಜೆಡಿಎಸ್ ಮೈತ್ರಿ ಮಾಡಿಕೊಂಡರೆ, ನಾವು ಸಮರ್ಥವಾಗಿ ಚುನಾವಣೆ ಎದುರಿಸುತ್ತೇವೆ ಪ್ರತಿಕ್ರಿಯಿಸಿದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!