ಮದ್ದೂರು: ಜಮೀನಿನಲ್ಲಿ ಕಬ್ಬು ಕಟಾವು ಮಾಡುವ ವೇಳೆ ಚಿರತೆ ರೀತಿಯ ಅಪರೂಪದ ಬೆಕ್ಕಿನ ಮರಿಯೊಂದು ಪತ್ತೆಯಾಗಿದೆ.
ಮದ್ದೂರು ತಾಲ್ಲೂಕಿನ ವಳಗೆರೆಹಳ್ಳಿಯ ಬಾಬು ಎಂಬುವವರ ಜಮೀನಿನಲ್ಲಿ ಅಪರೂಪದ ಬೆಕ್ಕಿನ ಮರಿ ಪತ್ತೆಯಾಗಿದೆ. ಈ ವೇಳೆ ಬಾಬು ಅವರು ಬೆಕ್ಕಿನ ಮರಿಯನ್ನು ಮನೆಗೆ ತೆಗದುಕೊಂಡು ಹೋಗಿದ್ದರು.
ಇದನ್ನು ನೋಡಿದ ಗ್ರಾಮಸ್ಥರು ಅರಣ್ಯ ಇಲಾಖೆಗೆ ಚಿರತೆ ಮರಿ ಎಂದು ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅರಣ್ಯಾಧಿಕಾರಿಗಳು ಪರಿಶೀಲಿಸಿ ಇದು ಅಪರೂಪದ ಬೆಕ್ಕಿನ ತಳಿಯ ಪ್ರಬೇಧ ಎಂದು ರೈತನಿಗೆ ವಾಪಸ್ ನೀಡಿದ್ದಾರೆ.





