ಮಂಡ್ಯ: ನೆನ್ನೆ ರಾತ್ರಿ ಚಿರತೆಯೊಂದು ತೋಟದ ಮನೆಗೆ ನುಗ್ಗಿ ಕೋಳಿ ಹೊತ್ತೊಯ್ದಿರುವ ಘಟನೆ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಪಿ.ಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಚಂದ್ರಶೇಖರ್ ಎಂಬುವವರ ತೋಟದಲ್ಲಿದ್ದ ಕೋಳಿಗಳನ್ನು ಹೊತ್ತೊಯ್ಯುತಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಚಿರತೆ ಗ್ರಾಮಕ್ಕೆ ಬಂದು ಕೋಳಿ ಹೊತ್ತೊಯ್ಯುತ್ತಿರುವ ಸುದ್ದಿ ತಿಳಿದು ಗ್ರಾಮದ ಜನರು ಆಂತಕ್ಕಕ್ಕೀಡಾಗಿದ್ದು, ಚಿರತೆ ಸೆರೆ ಹಿಡಿಯುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಅರಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.