Mysore
28
broken clouds

Social Media

ಬುಧವಾರ, 10 ಡಿಸೆಂಬರ್ 2025
Light
Dark

ಕೆಆರ್‌ಎಸ್‌ನಲ್ಲಿ ಕಾವೇರಿ ಆರತಿ ಮಾಡೋದಕ್ಕೆ ನಮ್ಮ ವಿರೋಧವಿದೆ: ಶಾಸಕ ಟಿ.ಎಸ್.ಶ್ರೀವತ್ಸ

ts shrivathsa

ಮೈಸೂರು: ಕಾವೇರಿ ನದಿಯ ಪಕ್ಕದಲ್ಲಿ ಸ್ವಚ್ಛತೆ ವ್ಯವಸ್ಥೆ ಮಾಡಿದರೆ ಅದೇ ಆರತಿ ಮಾಡಿದ ಹಾಗಾಗುತ್ತದೆ ಎಂದು ಬಿಜೆಪಿ ಶಾಸಕ ಟಿ.ಎಸ್.ಶ್ರೀವತ್ಸ ಹೇಳಿದ್ದಾರೆ.

ಈ ಕುರಿತು ಮೈಸೂರಿನಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 92 ಕೋಟಿ ರೂ ಖರ್ಚು ಮಾಡಿ ಕಾವೇರಿ ಆರತಿ ನಡೆಸುವ ಅವಶ್ಯಕತೆ ಇಲ್ಲ. ಈ ಮೂಲಕ ಸರ್ಕಾರ ನಾವು ಹಿಂದೂಗಳ ಪರವಾಗಿದ್ದೇವೆ ಎಂದು ತೋರಿಸಿಕೊಳ್ಳುತ್ತಿದೆ. ಕ್ಷೇತ್ರಗಳಲ್ಲಿ ರಸ್ತೆ ಸರಿಪಡಿಸಲು ಹಣವಿಲ್ಲ. ಒಬ್ಬೊಬ್ಬ ಶಾಸಕರು ಕೇವಲ 1 ಕೋಟಿ ಅನುದಾನಕ್ಕೆ ಬೇಡಿಕೊಳ್ಳುತ್ತಿದ್ದೇವೆ.
ಈಗಿರುವಾಗ ಕಾವೇರಿ ಆರತಿಗೆ 92 ಕೋಟಿ ಬಳಸುವ ಅವಶ್ಯಕತೆ ಇಲ್ಲ. ಕಾವೇರಿ ನದಿಯ ಪಕ್ಕದಲ್ಲಿ ಸ್ವಚ್ಛತೆ ವ್ಯವಸ್ಥೆ ಮಾಡಿದರೆ ಅದೇ ಕಾವೇರಿ ಆರತಿ ಮಾಡಿದ ಹಾಗೆ. ಹೀಗಾಗಿ ಕೆಆರ್‌ಎಸ್‌ನಲ್ಲಿ ಕಾವೇರಿ ಆರತಿ ಮಾಡೋದಕ್ಕೆ ನಮ್ಮ ವಿರೋಧವಿದೆ ಎಂದರು.

ಇನ್ನು ಗುಜರಾತ್‌ನ ಅಹಮದಾಬಾದ್‌ನಲ್ಲಿ ಸಂಭವಿಸಿದ ಭೀಕರ ವಿಮಾನ ದುರಂತ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಈ ಘಟನೆ ಮನಸ್ಸಿಗೆ ಬಹಳ ನೋವು ನೀಡಿದೆ. ಪ್ರಕರಣ ಕುರಿತು ತನಿಖೆ ನಡೆಸಬಹುದು. ದೇಶದಲ್ಲಿ ಇದೊಂದು ದೊಡ್ಡ ದುರಂತವಾಗಿದೆ. ಮೃತರ ಕುಟುಂಬದವರು ಹೇಗೆ ನೋವು ತಡೆದುಕೊಳ್ಳುತ್ತಾರೋ ಗೊತ್ತಿಲ್ಲ. ಆ ಎಲ್ಲಾ ಕುಟುಂಬಗಳಿಗೂ ತಾಯಿ ಚಾಮುಂಡೇಶ್ವರಿ ನೋವನ್ನು ತಡೆದುಕೊಳ್ಳುವ ಶಕ್ತಿ ನೀಡಲಿ ಎಂದು ಸಂತಾಪ ಸೂಚಿಸಿದರು.

Tags:
error: Content is protected !!