ಮಂಡ್ಯ : ರಾಜ್ಯದಾದ್ಯಂತ ಈಗಾಗಲೇ ಉತ್ತಮ ಮಳೆಯಾಗಿದ್ದು, ಎಲ್ಲಾ ಜಾಲಾಶಯಗಳ ನೀರಿನ ಮಟ್ಟ ಏರಿಕೆಯಾಗುತ್ತಿವೆ. ಕೇರಳ ಹಾಗೂ ವಯನಾಡು ಭಾಗದಲ್ಲಿ ಉತ್ತಮವಾದ ಮಳೆಯಾಗಿರುವ ಕಾರಣ ಜಿಲ್ಲೆಯ ಕೆ ಆರ್ ಎಸ್ ಜಲಾಶಯದ ಒಳ ಹರಿವಿನ ಮಟ್ಟ ದಿಢೀರ್ ಏರಿಕೆಯಾಗಿದೆ.
ಸದ್ಯ ಜಲಾಶಯದಲ್ಲಿ ೧೩,೪೩೭ ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ೮೭.೯೦ ಅಡಿ ಇದ್ದಂತಹ ಕೃಷ್ಣರಾಜ ಸಾಗರ ಅಣೆಕಟ್ಟೆಯ ನೀರಿನ ಮಟ್ಟ ಇದೀಗ ೯೦ ಅಡಿ ದಾಟಿದೆ. ಇದೇ ರೀತಿ ಕೇರಳ ಹಾಗೂ ವಯನಾಡಿನಲ್ಲಿ ಉತ್ತಮ ಮಳೆಯಾಗುತ್ತಿದ್ದರೆ ಮುಂದಿನ ೩ ರಿಂದ ೪ ದಿನಗಳಲ್ಲಿ ನೀರಿನ ಮಟ್ಟ ೧೦೦ ಅಡಿ ದಾಟುವ ಸಾಧ್ಯತೆ ಇದೆ.