Mysore
22
few clouds

Social Media

ಶನಿವಾರ, 31 ಜನವರಿ 2026
Light
Dark

ನಾಳೆ ಸಂಜೆ ವೇಳೆಗೆ ಕೆ.ಆರ್.ಎಸ್ ಜಲಾಶಯ ಸಂಪೂರ್ಣ ಭರ್ತಿ ಸಾಧ್ಯತೆ

ಮಂಡ್ಯ  : ಕಾವೇರಿ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ ಎಸ್‌ ಜಲಾಶಯದಲ್ಲಿ ೫ ದಿನಕ್ಕೆ ೧೫ ಟಿಎಂಸಿ ನೀರು ಸಂಗ್ರಹವಾಗಿದೆ. ನಾಳೆ ಸಂಜೆಯ ವೇಳೆಗೆ ಡ್ಯಾಂ ಸಂಪೂರ್ಣವಾಗಿ ಭರ್ತಿಯಾಗುವ ಸಾಧ್ಯತೆ ಇದೆ.

೧೨೪.೮೦ ಗರಿಷ್ಠ ಮಟ್ಟದ KRS ಡ್ಯಾಂನಲ್ಲಿ ೧೨೦ ಅಡಿ ಭರ್ತಿಯಾಗಿದ್ದು, ಸಂಪೂರ್ಣ ಭರ್ತಿಗೆ ಕೇವಲ ೪ ಅಡಿ ಮಾತ್ರ ಬಾಕಿ ಇದೆ.  ಜಲಾಶಯಕ್ಕೆ ೫೧೩೭೪ ಕ್ಯೂಸೆಕ್‌ ಒಳಹರಿವು ಬರುತ್ತಿದ್ದು, ಮುಂಜಾಗ್ರತಾ ಕ್ರಮವಾಗಿ ನದಿಗೆ ೧೦ ಸಾವಿರ ಕ್ಯೂಸೆಕ್‌ ಗೂ ಅಧಿಕ ನೀರು ಬಿಡುಗಡೆ ಮಾಡಲಾಗಿದೆ. ಯಾವುದೇ ಕ್ಷಣದಲ್ಲಾದ್ರೂ ಹೊರಹರಿವಿನ ಪ್ರಮಾಣ ಹೆಚ್ಚಾಗಬಹುದು. ಹೀಗಾಗಿ ಜಿಲ್ಲಾಡಳಿತ ಕೂಡ ನದಿ ಮಾತ್ರದ ಜನರಿಗೆ ಅಲರ್ಟ್‌ ಘೋಷಣೆ ಮಾಡಿದೆ. ಇನ್ನು ಕೆ.ಆರ್‌ ಎಸ್‌ ಜಲಾಶಯ ಭರ್ತಿಯತ್ತ ಸಾಗುತ್ತಿರುವುದರಿಂದ ಅನ್ನದಾತರಲ್ಲಿ ಸಂತಸ ಮನೆ ಮಾಡಿದೆ.

 

Tags:
error: Content is protected !!