Mysore
19
clear sky

Social Media

ಶುಕ್ರವಾರ, 02 ಜನವರಿ 2026
Light
Dark

ಕೆ ಆರ್‌ ಪೇಟೆ ಸರ್ಕಾರಿ ಬಸ್ ನಿಲ್ದಾಣದಲ್ಲಿದೆ : ಈಜುಕೊಳ..!

ಮಂಡ್ಕ ; ಕಳೆದ ಒಂದು ವರ್ಷದಿಂದ ಮೂರನೇ ಬಾರಿಗೆ ಪಟ್ಟಣದ ಸರ್ಕಾರಿ ಬಸ್ ನಿಲ್ದಾಣ ಈಜುಕೊಳದಂತಾಗಿದ್ದು ಕೂಡಲೇ ಸರ್ಕಾರಿ ಬಸ್ ನಿಲ್ದಾಣಕ್ಕೆ ಶಾಶ್ವತ ಪರಿಹಾರ ಒದಗಿಸಬೇಕು ಎಂದು ಜೆಡಿಎಸ್ ಮುಖಂಡ ಹಾಗೂ ಮನ್ಮುಲ್ ನಿರ್ದೇಶಕ ಹೆಚ್.ಟಿ.ಮಂಜು ಆಗ್ರಹಿಸಿದ್ದಾರೆ.

ಕಳೆದ ಎರಡು ದಿನಗಳ ಹಿಂದೆಯಷ್ಟೇ ಬಸ್ ನಿಲ್ದಾಣದಲ್ಲಿ ನೀರು ನುಗ್ಗಿ ಪ್ರಯಾಣಿಕರಿಗೆ ತೊಂದರೆಯಾಗಿದ್ದರೂ ತಾಲ್ಲೂಕು ಹಾಗೂ ಜಿಲ್ಲಾಡಳಿತದ ಮತ್ತು ಪುರಸಭೆಯ ಯಾವುದೇ ಅಧಿಕಾರಿಗಳು ಈ ಬಗ್ಗೆ ತಲೆಕೆಡಿಸಿಕೊಳ್ಳದ ಕಾರಣ ಬುಧವಾರ ಮುಂಜಾವಿನಲ್ಲಿ ಸುರಿದ ಮಳೆಗೆ ಬಸ್‍ನಿಲ್ದಾಣ ಈಜುಕೊಳದಂತಾಗಿದೆ.

ಎಂಟು ತಿಂಗಳ ಹಿಂದೆಯಷ್ಟೇ ಪ್ರಯಾಣಿಕರು ಬಸ್ ನಿಲ್ದಾಣದೊಳಗೆ ಸಿಲುಕಿದ್ದು ಅವರುಗಳನ್ನು ಅಗ್ನಿಶಾಮಕ ಸಿಬ್ಬಂದಿಗಳು ಹರಿಗೋಲಿನ ಸಹಾಯದಿಂದ ರಕ್ಷಣೆ ಮಾಡಿದ್ದರು. ಆಗಲೂ ಸಚಿವ ನಾರಾಯಣಗೌಡ ಸ್ಥಳ ಪರಿಶೀಲನೆ ಮಾಡಿ ಜಿಲ್ಲಾಧಿಕಾರಿಗಳಿಗೆ ರಾಜಕಾಲುವೆ ಒತ್ತುವರಿ ತೆರವು, ಹಾಗೂ ಮುಖ್ಯ ರಸ್ತೆಯ ಸೇತುವೆಯ ಕೆಳಗಿನ ಭಾಗವನ್ನು ಇಳಿಜಾರು ಮಾಡುವಂತೆ ಆದೇಶ ನೀಡಿದ್ದರೂ ಜಿಲ್ಲಾಧಿಕಾರಿಗಳು ಯಾವುದೇ ರೀತಿಯ ಕ್ರಮವಹಿಸದೇ ಇರುವುದು ಇಷ್ಟೆಲ್ಲಾ ಅನಾಹುತಗಳಿಗೆ ಕಾರಣವಾಗಿದೆ.

ಹೋಟೆಲ್ ಮಾಲೀಕರ ಗೋಳು ಹೇಳತೀರದು : ಬಸ್‍ನಿಲ್ದಾಣದಲ್ಲಿ ಹೋಟೆಲ್ ಉದ್ಯಮ ನಡೆಸುತ್ತಿರುವ ಮಾಲೀಕ ಗುರುಪ್ರಸಾದ್ ತಮ್ಮ ಸಂಕಷ್ಟವನ್ನು ಹೇಳತೀರದಾಗಿದೆ. ಸಾಧಾರಣ ಮಳೆಯಾದರೂ ಹೋಟೆಲ್‍ನ ಒಳಭಾಗಕ್ಕೆ ನೀರುನುಗ್ಗಿ ಎಲ್ಲಾ ಅಡುಗೆ ಸಾಮಗ್ರಿಗಳೂ ನೀರುಪಾಲಾಗುತ್ತಿವೆ. ಸಕ್ಕರೆ, ಗೋಧಿಹಿಟ್ಟು, ಮೈದ, ರವೆ, ಕಾಫಿ, ಟೀಪುಡಿ, ಅಕ್ಕಿ ಸೇರಿದಂತೆ ಲಕ್ಷಾಂತರ ರೂಪಾಯಿಗಳ ನಷ್ಟವುಂಟಾಗುತ್ತಿದೆ. ಪ್ರತೀ ಬಾರಿ ನೀರು ತುಂಬಿದಾಗಲೂ ಲಕ್ಷಾಂತರ ಮೌಲ್ಯದಷ್ಟು ನಷ್ಟವುಂಟಾಗುತ್ತಿದ್ದು ಇದಕ್ಕೆ ಹೊಣೆ ಯಾರು ಎಂದು ಪ್ರಶ್ನಿಸತೊಡಗಿದ್ದಾರೆ.¸

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!