ಕೆ.ಎಂ ದೊಡ್ಡಿ : ಇಲ್ಲಿನ ಸಮೀಪದ ತೊರೆಬೊಮ್ಮನಹಳ್ಳಿ ಗ್ರಾಮದ ಗ್ರಾಮದೇವತೆ ಶ್ರೀ ಪಟ್ಟಲದಮ್ಮನ ಈರಹಬ್ಬ(ಪರ) ಹಾಗೂ ಪೂಜಾ ಮಹೋತ್ಸವ ಬಹಳ ವಿಜೃಂಭಣೆಯಿಂದ ಜರುಗಿತು.
ಸಾವಿರಾರು ಮಂದಿ ದೇವಸ್ಥಾನಕ್ಕೆ ಆಗಮಿಸಿ ಗ್ರಾಮ ದೇವತೆ ಶ್ರೀಪಟ್ಟಲದಮ್ಮನಿಗೆ ಜೈಕಾರ ಮೊಳಗಿಸಿದರು.
ಶನಿವಾರ ಮಠದದೊಡ್ಡಿ ಗ್ರಾಮದ ಬಳಿರುವ ಶ್ರೀ ಹರಿಹರೇಶ್ವರ ದೇವಸ್ಥಾನದ ಆವರಣದಲ್ಲಿ ಗ್ರಾಮ ದೇವತೆಗಳಾದ ಶ್ರೀ ಪಟ್ಟಲದಮ್ಮ ,ಶ್ರೀಮಾರಮ್ಮ ಶ್ರೀ ಲಕ್ಸ್ಮಿದೇವಿ ಹಾಗೂ ಹರಿಗೆಗಳ ಪೂಜಾ ಕೈಂಕರ್ಯ, ಹೂಹೊಂಬಾಳೆ ಮೂಲಕ ತೊರೆಬೊಮ್ಮನಹಳ್ಳಿ ಗ್ರಾಮಕ್ಕೆ ಆಗಮಿಸಿ ಹರಿಗೆ ದೇವರುಗಳ ಉತ್ಸವ ನಡೆಸಿ ಗ್ರಾಮ ದೇವತೆಗೆ ಮಹಾಮಂಗಳಾರತಿ ನಡೆಸಿ ಹರಕೆ ಮರಿ ಸಲ್ಲಿಸಿದರು.
ಭಾನುವಾರ ಗ್ರಾಮ ದೇವತೆ ಶ್ರೀಪಟ್ಟಲದಮ್ಮ ಶ್ರೀ ಮಾರಮ್ಮ ಶ್ರೀಲಕ್ಷ್ಮಿದೇವಿ ದೇವಸ್ಥಾನದಲ್ಲಿ ಮಹಾಮಂಗಳಾರತಿ ನಡೆಸಿ ಈರಹಬ್ಬ (ಪರ)ಕ್ಕೆ ಚಾಲನೆ ನೀಡಿದರು.
ಮದ್ಯಾಹ್ನ ವೇಳೆಗೆ ದೇವಾಲಯದ ಆವರಣದಲ್ಲಿ ಅನ್ನಸಂತರ್ಪಣೆ ಜರುಗಿತು.