Mysore
25
light rain

Social Media

ಭಾನುವಾರ, 03 ನವೆಂಬರ್ 2024
Light
Dark

ತಮಿಳುನಾಡಿಗೆ ಕಾವೇರಿ : ಕೆಆರ್‌ಎಸ್‌ ಜಲಾಶಯದ ಬಳಿ ನೀರಿಗಿಳಿದು ರೈತರ ಪ್ರತಿಭಟನೆ

ಮಂಡ್ಯ : ತಮಿಳುನಾಡಿಗೆ ನೀರು ಬಿಡುವಂತೆ ಕಾವೇರಿ ನಿರ್ವಹಣಾ ಪ್ರಾಧಿಕಾರ ಆದೇಶ ಹೊರಡಿಸಿದೆ. ಅದರಂತೆ ಸರ್ಕಾರ ಹೆಚ್ಚುವರಿ ನೀರನ್ನು ಹರಿಸುತ್ತಿದ್ದು, ಈ ಹಿನ್ನಲೆ ರೈತರು ರಾಜ್ಯ ಸರ್ಕಾರದ ನಡೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿ, ರಾಜ್ಯ ರೈತಸಂಘದ ಕಾರ್ಯಕರ್ತರು ಸೇರಿ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಕೆಆರ್​ಎಸ್ ಜಲಾಶಯದ ಬಳಿ ಕಾವೇರಿ ನದಿಗೆ ಇಳಿದು ತಮಿಳುನಾಡಿಗೆ ‌ನೀರು ಹರಿಸುತ್ತಿರುವುದನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ್ದಾರೆ.

ಇತ್ತ ಕಾವೇರಿಗಾಗಿ ಎಚ್​.ಡಿ.ದೇವೇಗೌಡರು ಪೂಜೆ ಮಾಡುತ್ತಿದ್ದಾರೆ ಎಂದು ಮಂಡ್ಯದಲ್ಲಿ ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಹೇಳಿದ್ದಾರೆ.ಕಾಂಗ್ರೆಸ್ ಸರ್ಕಾರ ರಾಜ್ಯದ ರೈತರನ್ನು ಉಳಿಸುವುದಿಲ್ಲ. ನೀನು ಹೋರಾಟಕ್ಕೆ ಹೋಗಿ ಎಂದು ನನ್ನನ್ನು ಕಳುಹಿಸಿದ್ದಾರೆ. ತಮಿಳುನಾಡಿಗೆ 5000 ಕ್ಯೂಸೆಕ್ ನೀರು ಬಿಡುತ್ತೇವೆ ಅಂತೀರಾ?. ನಿಮಗೆ ಹಾಗೇ ಹೇಳುವ ಅಧಿಕಾರ ಕೊಟ್ಟವರು ಯಾರು?, ಸಂಕಷ್ಟದ ಬಗ್ಗೆ ಮೊದಲೇ ಪ್ರಾಧಿಕಾರಕ್ಕೆ ಯಾಕೆ ಮನವಿ ಮಾಡಲಿಲ್ಲ ಎಂದು ರಾಜ್ಯ ಸರ್ಕಾರದ ವಿರುದ್ದ ಕಿಡಿಕಾರಿದ್ದಾರೆ.

ಕಾಂಗ್ರೆಸ್​​ನವರು 5 ಗ್ಯಾರಂಟಿ ಶಿವ ಅಂತೀರಾ, ಲಿಕ್ಕರ್​ಗೆ 30 ರೂಪಾಯಿ ಜಾಸ್ತಿ ಮಾಡಿದ್ದೀರಲ್ಲ ಶಿವ ಎಂದು ರಾಜ್ಯ ಸರ್ಕಾರವನ್ನು ಕುಟುಕಿದ್ದಾರೆ. ಈ ಕೂಡಲೇ ತಮಿಳುನಾಡಿಗೆ ನೀರು ಹರಿಸುವುದನ್ನು ನಿಲ್ಲಿಸುವಂತೆ ಆಗ್ರಹಿಸಿದ್ದಾರೆ. ನೀರು ನಿಲ್ಲಿಸೋಕೆ ನಿಮಗೆ ಧೈರ್ಯವಿಲ್ವಾ ಎಂದು ಸರ್ಕಾರಕ್ಕೆ ಪ್ರಶ್ನೆ ಮಾಡಿದ ಜಿಟಿಡಿ, ಜೈಲಿಗೆ ಹೋದರೂ ಪರವಾಗಿಲ್ಲ ನೀರು ನಿಲ್ಲಿಸಿ, ರೈತರ ಪರ ನಿಲ್ಲಿ ಎಂದಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ