Mysore
27
broken clouds

Social Media

ಮಂಗಳವಾರ, 09 ಡಿಸೆಂಬರ್ 2025
Light
Dark

ಪ್ಯಾರಾ ಟೇಬಲ್‌ಟೆನಿಸ್ನ್ ಚಾಂಪಿಯನ್ ಆಗಿ ಕೀರ್ತಿ ತಂದ ಜಗನ್ನಾಥ್

jagannat tennis

ಕಿಕ್ಕೇರಿ : ಹೋಬಳಿಯ ಹೆಗ್ಗಡಹಳ್ಳಿ ಗ್ರಾಮದ ಕಮಲಮ್ಮ ಮಂಜುನಾಥೇಗೌಡ ಅವರ ಪುತ್ರ ವಿಶೇಷಚೇತನ ಜಗನ್ನಾಥ್ ಕ್ರೀಡಾ ಪ್ರತಿಭೆಯಾಗಿದ್ದು, ಭಾರತದ ಪ್ಯಾರಾ ಟೇಬಲ್ ಟೆನ್ನಿಸ್ ಸ್ಪರ್ಧೆಯಲ್ಲಿ 2ನೇ ಸ್ಥಾನಗಳಿಸಿ ತಾಲ್ಲೂಕಿಗೆ ಮತ್ತು ರಾಜ್ಯಕ್ಕೆ, ದೇಶಕ್ಕೆ ಕೀರ್ತಿ ತಂದಿದ್ದಾರೆ.

ಅಲ್ಲದೆ ನವದೆಹಲಿ, ಕರ್ನಾಟಕ, ಚನ್ನೈ, ಗೋವಾ, ಮಧ್ಯಪ್ರದೇಶ, ಗುಜರಾತ್, ಗೌರತ್ ಹಲವು ಕಡೆ ನಡೆದ ಖೇಲೋ ಇಂಡಿಯಾ ಪ್ಯಾರಾ ಟೇಬಲ್ ಟೆನಿಸ್‌ನಲ್ಲಿ ಚಿನ್ನದ ಪದಕ, ಬೆಳ್ಳಿ ಪದಕ, ಕಂಚಿನ ಪದಕ ಗಳಿಸಿದ್ದು, ಪ್ರಥಮ, ದ್ವಿತಿಯ ಸ್ಥಾನದಲ್ಲಿ ಗೆಲವು ಸಾಽಸಿ ತಾಲ್ಲೂಕಿನ ಮತ್ತು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.

ಮೂರು ಬಾರಿ ರಾಜ್ಯ ಚಾಂಪಿಯನ್ ಆಗಿರುವ ಜಗನ್ನಾಥ್ ಅವರು ಟೋಕಿಯೋ-2025ರ ಅಂತರಾಷ್ಟ್ರೀಯ ಟೂರ್ನಮೆಂಟ್‌ನಲ್ಲಿ ಭಾರತವನ್ನು ಪ್ರತಿನಿಧಿಸಲು ಸಜ್ಜಾಗುತ್ತಿದ್ದಾರೆ ಎಂಬುದು ಹೆಮ್ಮೆಯ ಸಂಗತಿ.

ಜಗನ್ನಾಥ್ ಅವರು ಮೂಲತಃ ಕೃಷಿಕ ಕುಟುಂಬದಿಂದ ಬಂದವರು. ಕಳೆದ ೮ ವರ್ಷದ ಹಿಂದೆ ನಡೆದ ಬೈಕ್ ಅಪಘಾತದಲ್ಲಿ ಬೆನ್ನಿನ ಮೂಳೆ ಮುರಿದು ಅಂಗವಿಕತೆ ಬಾಧಿಸಿತು. ಈ ಅಂಗವಿಕಲತೆಯನ್ನು ಮೆಟ್ಟಿ ನಿಂತು ಅವರ ನಿರಂತರ ಪರಿಶ್ರಮ, ಆತ್ಮವಿಶ್ವಾಸ, ಅತಿ ದೊಡ್ಡ ಕನಸು, ಗೆಲ್ಲಲೇಬೇಕು ಎನ್ನುವ ಛಲ ಇರುವ ಜಗನ್ನಾಥ್ ಅವರ ಸಾಧನೆಗೆ ನಮ್ಮೇಲ್ಲರ ಸಹಕಾರ ಪ್ರೋತ್ಸಾಹ ಮುಖ್ಯವಾಗಿದ್ದು, ಎಲ್ಲಾ ಜನತೆ ಕೈ ಜೋಡಿಸಿ, ತಾಲ್ಲೂಕಿಗೆ ರಾಜ್ಯಕ್ಕೆ, ದೇಶಕ್ಕೆ ಮತ್ತೊಮ್ಮೆ ಗೌರವ ತಂದುಕೊಡಲಿ ಎಂಬುದು ಜನತೆಯ ಹಾರೈಕೆ.

ಕ್ರೀಡೆಯಲ್ಲಿ ಭಾಗವಹಿಸಲು ವಿದೇಶಕ್ಕೆ ತೆರಳುತ್ತಿರುವ ಜಗನ್ನಾಥ್ ಅವರಿಗೆ ಸೈಕಲ್‌ಬ್ರಾಂಡ್ ಅಗರಬತ್ತಿ ಕಂಪನಿಯು ಆರ್ಥಿಕ ನೆರವು ನೀಡಿ ಗೌರವಿಸಿ ಪ್ರೋತ್ಸಾಹ ನೀಡಿದ್ದಾರೆ. ತಾಲ್ಲೂಕಿನ ಜನತೆಯ ಪರವಾಗಿ ಅಗರಬತ್ತಿ ಕಂಪನಿಗೆ ಧನ್ಯವಾದಗಳನ್ನು ತಿಳಿಸಲಾಗಿದೆ.

Tags:
error: Content is protected !!