ಮಂಡ್ಯ: ಮಳೆಹಾನಿಗೊಳಗಾದ ಮದ್ದೂರು ತಾಲ್ಲೂಕಿನ ಕೆ.ಎಂ.ದೊಡ್ಡಿ, ಹನುಮಂತನಗರ ಮಾರ್ಗದ ರಸ್ತೆ, ಬ್ರಿಡ್ಜ್ ಗಳು, ಹಲಗೂರು, ಮುತ್ತತ್ತಿ ರಸ್ತೆ,ಗುತ್ತಲು ಹತ್ತಿರ ಹೆಬ್ಬಾಳ ಬ್ರಿಡ್ಜ್ ಹಾಗೂ ಅರ್ಕೇಶ್ವರ ದೇವಸ್ಥಾನದ ಹತ್ತಿರದ ಹಳ್ಳದಲ್ಲಿ ನೀರು ತುಂಬಿ ಬ್ರಿಡ್ಜ್ ಮೇಲೆ ಹರಿಯುತ್ತಿರುವ ಸ್ಥಳಕ್ಕೆ ಜಿಲ್ಲಾಧಿಕಾರಿ ಎಸ್.ಅಶ್ವತಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.
ನಂತರ ಮಂಡ್ಯ ಸಂತೆಮಾಳದ ಹತ್ತಿರ ಮಳೆನೀರಿನಿಂದ ತುಂಬಿ ಹರಿಯುತ್ತಿರುವ ಹಳ್ಳಗಳನ್ನು ವೀಕ್ಷಣೆ ಮಾಡಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮಳೆ ಹಾನಿಗೊಳಗಾದ ಪ್ರದೇಶವನ್ನು ಸರಿಪಡಿಸಲು ಸೂಕ್ತ ಮಾರ್ಗದರ್ಶನ ನೀಡಿದರು.
ಇದೇ ಸಂದರ್ಭದಲ್ಲಿ ತಹಸೀಲ್ದಾರ್ ಕುಂಇ ಅಹಮದ್ ಸೇರಿದಂತೆ ಇತರರು ಉಪಸ್ಥಿತರಿದ್ದರು.





