ಮಂಡ್ಯ : ಸೂರಜ್ ರೇವಣ್ಣ ಬಂಧನ ವಿಚಾರಕ್ಕೆ ಸಂಬಂಧಪಟ್ಟಂತೆ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಪ್ರತಿಕ್ರಿಯೆ ನೀಡಿದರು.
ʼದೇವೇಗೌಡರ ಕುಟುಂಬಕ್ಕೆ ಈ ರೀತಿ ಆಗ್ತಿರೋದು ನಮಗೂ ಮುಜುಗರ ಇದೆ. ಕಾನೂನಿದೆ ಎರಡೂ ಕಡೆಯಿಂದ ದೂರು ದಾಖಲಾಗಿದೆ. ಪೊಲೀಸರು ಮತ್ತು ಎಸ್ಐಟಿ ತಂಡ ತನಿಖೆ ನಡೆಸುತ್ತಿದೆ. ರಾಜಕಾರಣ ತೀರಾ ವೈಯಕ್ತಿಕವಾಗಿ ಹೋಗಬಾರದು. ಅಭಿವೃದ್ಧಿ ಮೇಲೆ ರಾಜಕಾರಣ ಮಾಡಬಹುದುʼ ಎಂದು ಹೇಳಿದರು.
ಮದ್ದೂರು ಶಾಸಕ ಕದಲೂರು ಉದಯ್ ಗನ್ ಮ್ಯಾನ್ ಹಾಗೂ ದರ್ಶನ್ ಬಾಡಿಗಾರ್ಡ್ ನಡುವಿನ ಗಲಾಟೆ ವಿಚಾರಕ್ಕೂ ಪ್ರತಿಕ್ರಿಯೆ ನೀಡಿದ ಸಚಿವರು ಈ ಬಗ್ಗೆ ಪೊಲೀಸರಿದ್ದಾರೆ ಅವರ ಇಲಾಖೆಯವರೇ ಇರೋದ್ರಿಂದ ತನಿಖೆ ಮಾಡುತ್ತಾರೆ. ಅವರಿಬ್ಬರು ಸ್ನೇಹಿತರ ಏನು ಎಂಬ ಬಗ್ಗೆ ನಮಗೆ ಗೊತ್ತಿಲ್ಲ. ಇದರ ಬಗ್ಗೆ ನಾನು ನಿನ್ನೆಯೇ ಮಾತಾಡಿದ್ದೇನೆ ಎಂದು ಹೇಳಿದರು.