ಮಂಡ್ಯ. : ಬೀಡಿ ಕಾಲೋನಿಯಲ್ಲಿ ಮಳೆಯಿಂದ ಹಾನಿಯಾಗಿರುವ 2,000 ಮನೆಗಳಿಗೆ ಶಾಶ್ವತ ಪರಿಹಾರವನ್ನು ಮಾಡಲಾಗುತ್ತದೆ. ತಾತ್ಕಾಲಿಕವಾಗಿ 1.2 ಕೋಟಿ ಹಣವನ್ನು ಬಿಡುಗಡೆ ಮಾಡಲಾಗಿದೆ. ಮಳೆ ನೀರು ತುಂಬಿದ ಸಂದರ್ಭದಲ್ಲಿ ಕಡಿಮೆ ಅನಾಹುತ ಆಗಿದೆ ತಕ್ಷಣ ಮುಖ್ಯಮಂತ್ರಿಗಳ ಗಮನಕ್ಕೆ ತರುತ್ತೇನೆ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಗೋಪಾಲಯ್ಯ ರವರು ತಿಳಿಸಿದರು.
ಬೂದನೂರು, ವಿವೇಕಾನಂದ ಬಡಾವಣೆ ಪರಿಸ್ಥಿತಿ ಅವಲೋಕನ ಮಾಡಿ ಅಧಿಕಾರಿಗಳಿಂದ ಮಾಹಿತಿಯನ್ನು ಪಡೆದುಕೊಂಡು, ಸ್ಥಳೀಯರಿಂದ ಸಮಸ್ಯೆಗಳನ್ನು ಆಲಿಸಿ, ಪ್ರವಾಹದ ನೀರು ನಿಯಂತ್ರಣ ಮಾಡಬೇಕು.
ಕೆರೆಯಂಗಳದ ವಿವೇಕಾನಂದ ಬಡಾವಣೆ, ಬೀಡಿ ಕಾಲೋನಿಗೆ ಭೇಟಿ ನೀಡಿ. ಮಳೆ ಹೆಚ್ಚಾಗಿ ಬರುತ್ತಿದ್ದು, ಮಳೆ ಕಡಿಮೆ ಆದ ಮೇಲೆ ಹಾನಿಯಾಗಿರುವ ಸ್ಥಳವನ್ನು ಅಧಿಕಾರಿಗಳು ಪರಿಶೀಲನೆ ಮಾಡಿ ಪರಿಹಾರ ನೀಡಬೇಕು ಎಂದರು.