Mysore
30
few clouds

Social Media

ಭಾನುವಾರ, 05 ಏಪ್ರಿಲ 2026
Light
Dark

15 ಸಾವಿರ ಕೋಟಿ ರೂ ಕಿಕ್‌ ಬ್ಯಾಕ್:‌ ಡಿಕೆಶಿ ವಿರುದ್ಧ ಎಚ್‌ಡಿಕೆ ಗಂಭೀರ ಆರೋಪ

ಮಂಡ್ಯ: ಮೂವತ್ತು ವರ್ಷಕ್ಕೆ ಲೀಸ್‌ಗೆ ಕೊಟ್ಟಿದ್ದಾರೆ. ಅದರಲ್ಲೂ 45 ಸಾವಿರ ಕೋಟಿಗೆ 15 ಸಾವಿರ ಕೋಟಿ ಕಿಕ್‌ ಬ್ಯಾಕ್‌ ಪಡೆಯಲು ಪೆನ್ನು ಪೇಪರ್‌ ಪಡೆದವರು ಮುಂದಾಗಿದ್ದಾರೆ ಎಂದು ಹೆಸರೇಳದೇ ಡಿಕೆಶಿ ವಿರುದ್ಧ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಕಸ ಎತ್ತಲೂ ಬ್ಲಾಕ್‌ಲೀಸ್ಟ್‌ನಲ್ಲಿ ಇರುವ ಗುತ್ತಿಗೆದಾರನಿಗೆ ಟೆಂಡರ್‌ ಕೊಟ್ಟಿದ್ದಾರೆ ಎಂದು ಹೆಸರೇಳದೇ ಡಿಕೆಶಿ ವಿರುದ್ಧ ಕೇಂದ್ರ ಸಚಿವ ಹೆಚ್‌.ಡಿ.ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.

ಈ ಬಗ್ಗೆ ಮಂಡ್ಯದಲ್ಲಿ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮೂವತ್ತು ವರ್ಷಕ್ಕೆ ಲೀಸ್‌ಗೆ ಕೊಟ್ಟಿದ್ದಾರೆ. ಅದರಲ್ಲೂ 45 ಸಾವಿರ ಕೋಟಿಗೆ 15 ಸಾವಿರ ಕೋಟಿ ಕಿಕ್‌ ಬ್ಯಾಕ್‌ ಪಡೆಯಲು ಪೆನ್ನು ಪೇಪರ್‌ ಪಡೆದವರು ಮುಂದಾಗಿದ್ದಾರೆ. ಆದರೆ, ಮೂವತ್ತು ವರ್ಷಕ್ಕೆ ನಾವು ನೀವು ಬದುಕಿರಲ್ಲ ಎಂದಿದ್ದಾರೆ.

ಇನ್ನೂ ಮುಂದುವರಿದು ಮಾತನಾಡಿದ ಅವರು, ಈಗಾಗಲೇ ಎಸ್‌ಸಿ, ಎಸ್‌ಟಿ ಹಣ ಲೂಟಿ ಹೊಡೆದು ರಾಜಾರೋಷವಾಗಿ ಓಡಾಟ ನಡೆಸಿದ್ದಾರೆ. ಅಂತಹ ಭಂಡತನದ ರಾಜಕಾರಣ ನಾನು ಮಾಡಲ್ಲ ಎಂದು ಚಲುವರಾಯಸ್ವಾಮಿ ವಿರುದ್ಧ ಹೆಚ್‌ಡಿಕೆ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ. ಜೆಡಿಎಸ್‌ ನಿರ್ನಾಮ ಮಾಡಿದ್ದೇವೆ ಎಂಬ ನಿಮ್ಮ ಅಹಂಕಾರದ ಮಾತುಗಳು, ನಾನು ಲೋಕಸಭೆಗೆ ನಿಲ್ಲುವಂತೆ ಮಾಡಿತು. ನನ್ನ ಬಗ್ಗೆ ಏನು ಬೇಕಾದರೂ ಮಾತನಾಡಿ, ಆದರೆ ದೇವೇಗೌಡರ ಬಗ್ಗೆ ಲಘುವಾಗಿ ಮಾತನಾಡಬೇಡಿ ಎಂದು ಕಿಡಿಕಾರಿದರು.

 

Tags:
error: Content is protected !!