ಮೇಲುಕೋಟೆ: ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಅವರು ಸ್ಪರ್ಧಿಸಿ, ಬಹುಮತ ಸಾಧಿಸುವ ಮೂಲಕ ಕೇಂದ್ರ ಮಂತ್ರಿಯಾದ ಕಾರಣ ಅವರ ಅಭಿಮಾನಿಯೋರ್ವ ಮಂಡಿಯಿಂದ ಮೇಲುಕೋಟೆ ಮೆಟ್ಟಿಲು ಹತ್ತಿ ತಮ್ಮ ಹರಕೆ ತೀರಿಸಿದ್ದಾರೆ.
ಮಾಜಿ ಸಿಎಂ ಎಚ್‌ಡಿಕೆ ಕೇಂದ್ರ ಮಂತ್ರಿಯಾದರೆ ತಾವು ಮಂಡಿಯಿಂದ ಮೇಲುಕೊಟೆಯ 365 ಮೆಟ್ಟಿಲುಗಳನ್ನು ಹತ್ತುವ ಮೂಲಕ ಹರಕೆ ತೀರಿಸುವುದಾಗಿ ಲೋಕೇಶ್ ದೇವರಿಗೆ ಮೊರೆ ಹೋಗಿದ್ದರು. ಅದರಂತೆ ತಾವು ಮಂಡಿಯಿಂದ ಮೇಲುಕೋಟೆ ಹತ್ತಿ ತಮ್ಮ ಹರಕೆಯನ್ನು ಪೂರೈಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಚಿಕ್ಕಮಂಡ್ಯದ ಲೋಕೇಶ್, ತಾವು ಎಚ್‌ಡಿಕೆ ಆವರ ದೊಡ್ಡ ಅಭಿಮಾನಿಯಾಗಿದ್ದು, ಅವರು ಆರೋಗ್ಯದಲ್ಲಿ ಚೇತರಿಕೆ ಕಾಣಬೇಕು. ಕೇಂದ್ರದಲ್ಲಿ ಮಂತ್ರಿಸ್ಥಾನ ಗಳಿಸಬೇಕು ಎಂದು ಮೇಲುಕೋಟೆಯ ಯೋಗನರಸಿಂಹಸ್ವಾಮಿ ಗೆ ಹರಕೆ ಹೊತ್ತಿದ್ದೆ. ನನ್ನ ಬೇಡಿಕೆಯಂತೆ ಎಚ್‌ಡಿ ಕುಮಾರಸ್ವಾಮಿ ಅವರು ಮಂತ್ರಿಯಾಗಿದ್ದು, ನನ್ನ ಬೇಡಿಕೆ ಫಲಿಸಿದ್ದರಿಂದ ನನ್ನ ಹರಕೆಯನ್ನು ಪೂರ್ಣಗೊಳಿಸಿದ್ದೇನೆ ಎಂದು ಹೇಳಿದರು.