Mysore
30
scattered clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

 ಶ್ರೀರಂಗಪಟ್ಟಣದಲ್ಲಿಂದು ಮೊಳಗಲಿದೆ ಹನುಮನಾಮ ಭಜನೆ

ಮಂಡ್ಯ: ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಹನುಮ ಮಾಲಾಧಾರಿಗಳ ಬೃಹತ್‌ ಸಂಕೀರ್ತನಾ ಯಾತ್ರೆ ನಡೆಯಲಿರುವ ಹಿನ್ನೆಲೆಯಲ್ಲಿ ಕೇಸರಿ ಬಂಟಿಂಗ್ಸ್‌ ಮತ್ತು ಫ್ಲೆಕ್ಸ್‌ಗಳು ರಾರಾಜಿಸುತ್ತಿವೆ.

ಸಂಕೀರ್ತನಾ ಯಾತ್ರೆ ಸಾಗುವ ಪಟ್ಟಣದ ಮುಖ್ಯ ಬೀದಿಗೆ ಕೇಸರಿ ಬಂಟಿಂಗ್ಸ್‌ ಹಾಕಿ ಅಲಂಕಾರ ಮಾಡಲಾಗಿದೆ.

ಈ ಸಂಕೀರ್ತನಾ ಯಾತ್ರೆಯಲ್ಲಿ ಐದು ಸಾವಿರಕ್ಕೂ ಹೆಚ್ಚು ಮಾಲಾಧಾರಿಗಳು ಭಾಗಿಯಾಗಲಿದ್ದಾರೆ.

ಇನನು ಪಟ್ಟಣದ ವಿವಾದಿತ ಜಾಮಿಯಾ ಮಸೀದಿ ಮೇಲೆ ಮಾಲಾಧಾರಿಗಳು ಕಣ್ಣಿದ್ದು, ವಿವಾದಿತ ಮಸೀದಿ ಜಾಗ ಮೂಡಲ ಬಾಗಿಲು ಆಂಜನೇಯನ ಮೂಲ ದೇಗುಲ ಸ್ಥಾನ ಅನ್ನೋದು ಹನುಮ ಭಕ್ತರ ವಾದವಾಗಿದೆ.

ಈ ಹಿನ್ನೆಲೆಯಲ್ಲಿ ಶ್ರೀರಂಗಪಟ್ಟಣದಲ್ಲಿ ಎರಡು ದಶಕಗಳಿಂದ ಹನುಮಮಾಲಾಧಾರಿಗಳ ಸಂಕೀರ್ತನಾ ಯಾತ್ರೆ ನಡೆಸಲಾಗುತ್ತಿದೆ.

ಗಂಜಾಂನ ಹನುಮ ದೇವಾಲಯದಿಂದ ರಂಗನಾಥ ದೇಗುಲದವರೆಗೂ ಈ ಸಂಕೀರ್ತನಾ ಯಾತ್ರೆ ನಡೆಯಲಿದೆ.

ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಸಂಕೀರ್ತನಾ ಯಾತ್ರೆಗೆ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದಾರೆ. ಪೊಲೀಸ್‌ ಇಲಾಖೆಯು ಸಹ ಹನುಮ ಮಾಲಾಧಾರಿಗಳ ಮೇಲೆ ಹದ್ದಿನ ಕಣ್ಣಿಟ್ಟಿದೆ.

Tags: