Mysore
23
haze

Social Media

ಶುಕ್ರವಾರ, 12 ಡಿಸೆಂಬರ್ 2025
Light
Dark

ಗೌಡಗೆರೆ ಚಾಮುಂಡೇಶ್ವರಿ ವಿಗ್ರಹ: ಏಷ್ಯಾ ಬುಕ್‌ ಆಫ್‌ ರೆಕಾರ್ಡ್ಸ್‌, ಇಂಡಿಯಾ ಬುಕ್‌ ಆಫ್‌ ರೆಕಾರ್ಡ್ಸ್‌ ಗೌರವ

ಚನ್ನಪಟ್ಟಣ: ತಾಲ್ಲೂಕಿನ ಗೌಡಗೆರೆಯ 60 ಅಡಿ ಎತ್ತರದ ಚಾಮುಂಡೇಶ್ವರಿ ಪಂಚಲೋಹ ವಿಗ್ರಹಕ್ಕೆ ಎತ್ತರದ ಪಂಚಲೋಹ ವಿಗ್ರಹ ಎಂದು ಏಷ್ಯಾ ಬುಕ್‌ ಆಫ್‌ ರೆಕಾರ್ಡ್ಸ್‌ ಹಾಗೂ ಇಂಡಿಯಾ ಬುಕ್‌ ಆಫ್‌ ರೆಕಾರ್ಡ್ಸ್‌ ಗೌರವ ಲಭಿಸಿದೆ.

ಈ ವಿಗ್ರಹವನ್ನು 2021ರಲ್ಲಿ ಗೌಡಗೆರೆ ಗ್ರಾಮದಲ್ಲಿ ಪ್ರತಿಷ್ಠಾಪಿಸಲಾಗಿದ್ದು, ಚಿನ್ನ, ಬೆಳ್ಳಿ, ಹಿತ್ತಾಳೆ, ಕಂಚು ಹಾಗೂ ತಾಮ್ರ ಬಳಸಿ 18 ಭುಜಗಳ ಸಿಂಹಾವರೂಢ ಪಂಚಲೋಹದ ವಿಗ್ರಹವಾಗಿದೆ. ಇದು ಸುಮಾರು 35 ಕೆ.ಜಿ. ಟನ್‌ ತೂಕವಿದ್ದು, ಗೌಡಗೆರೆ ಚಾಮುಂಡೇಶ್ವರಿಗೆ ಎತ್ತರದ ವಿಗ್ರಹ ಗರಿ ಸಿಕ್ಕಿದೆ.

ಇನ್ನೂ ಗೌಡಗೆರೆಯಲ್ಲಿ ಭಾನುವಾರ(ಜನವರಿ.26) ನಡೆದ ಕಾರ್ಯಕ್ರಮದಲ್ಲಿ ಏಷ್ಯಾ ಬುಕ್‌ ಆಫ್‌ ರೆಕಾರ್ಡ್ಸ್‌ ಹಾಗೂ ಇಂಡಿಯಾ ಬುಕ್‌ ಆಫ್‌ ರೆಕಾರ್ಡ್ಸ್‌ ಮುಖ್ಯಸ್ಥ ಸಾಗರ್‌ ಅವರು ಕ್ಷೇತ್ರದ ಧರ್ಮದರ್ಶಿ ಮಲ್ಲೇಶ್‌ ಗುರೂಜಿ ಅವರಿಗೆ ಪ್ರಮಾಣಪತ್ರ ಹಸ್ತಾಂತರಿಸಿದ್ದಾರೆ.

ಇದೇ ಸಂದರ್ಭದಲ್ಲಿ ನಿವೃತ್ತ ಪೊಲೀಸ್‌ ಅಧಿಕಾರಿ ರಾಮಕೃಷ್ಣಪ್ಪ, ಬಾಬು, ಸಗಾಯಿರಾಜು, ಸಂಘಟಕ ಸಂಜೀವ ರೆಡ್ಡಿ ಹಾಗೂ ಮಾಗನೂರು ಗಂಗರಾಜು ಉಪಸ್ಥಿತರಿದ್ದರು.

Tags:
error: Content is protected !!