Mysore
28
scattered clouds

Social Media

ಗುರುವಾರ, 11 ಡಿಸೆಂಬರ್ 2025
Light
Dark

ಕೃಷಿ ಚಟುವಟಿಕೆಗೆ ಸರ್ಕಾರ ನಿರಂತರವಾಗಿ ಪ್ರೋತ್ಸಾಹ ನೀಡಲು ಬದ್ಧ: ಎನ್ ಚಲುವರಾಯಸ್ವಾಮಿ

Chaluvarayaswamy

ಮಂಡ್ಯ : ರಾಜ್ಯದಲ್ಲಿ ಶೇ 60 ರಿಂದ 70 ರಷ್ಟು ಜನ ಕೃಷಿ ಪದ್ಧತಿಯ ಮೇಲೆ ಅವಲಂಬಿಸಿದ್ದು, ಕೃಷಿ ಚಟುವಟಿಕೆಗೆ ಸರ್ಕಾರ ನಿರಂತರವಾಗಿ ಪ್ರೋತ್ಸಾಹ ನೀಡಲು ಬದ್ಧವಾಗಿದೆ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್ ಚಲುವರಾಯಸ್ವಾಮಿ ಅವರು ತಿಳಿಸಿದರು.

ಅವರು ಇಂದು ಜಿಲ್ಲಾ ಪಂಚಾಯತ್ ಪಕ್ಕದಲ್ಲಿರುವ ಕೃಷಿ ಇಲಾಖೆ ಸಭಾಂಗಣದಲ್ಲಿ ಕೃಷಿ ಇಲಾಖೆ ಹಾಗೂ ಜಿಲ್ಲಾ ಕೃಷಿ ತರಬೇತಿ ಸಂಸ್ಥೆ ವತಿಯಿಂದ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದಲ್ಲಿ ರೈತ ಬಜಾರ್ (R- ಮಾಟ್೯ ) ಸ್ಥಾಪನೆ ಕುರಿತು ಒಂದು ದಿನದ ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತನಾಡಿದರು. ರಾಜ್ಯದಲ್ಲಿ ಹೆಚ್ಚು ಜನರು ಕೃಷಿಯನ್ನು ಅವಲಂಭಿಸಿದ್ದು, ರೈತರು ಆರ್ಥಿಕವಾಗಿ ಸದೃಢರಾದರೆ ರಾಜ್ಯ ಅಭಿವೃದ್ಧಿಯಾಗುತ್ತದೆ ಎಂಬ ದೃಷ್ಟಿಯಿಂದ ಕೃಷಿ ಇಲಾಖೆಗೆ ಹೆಚ್ಚಿನ ಯೋಜನೆಗಳನ್ನು ನೀಡುತ್ತಿದ್ದರೆ. ರೈತರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಪಂಚ ಗ್ಯಾರಂಟಿ ಯೋಜನೆಗಳು, ಹಾಲಿಗೆ ಸಹಾಯಧನ ಸೇರಿದಂತೆ ವಿವಿಧ ರೀತಿಯ ಸಬ್ಸಿಡಿಗಳನ್ಮು ನೀಡಿ ರಾಜ್ಯವನ್ನು ರಾಮ ರಾಜ್ಯ ಮಾಡುವ ಪ್ರಯತ್ನದಲ್ಲಿ ಮಾನ್ಯ ಮುಖ್ಯಮಂತ್ರಿಗಳು ಹಾಗೂ ಉಪ ಮುಖ್ಯಮಂತ್ರಿಗಳು ಶ್ರಮಿಸುತ್ತಿದ್ದರೆ ಎಂದರು.

ರೈತರು ಬೆಳೆದ ಬೆಳೆಗಳನ್ನು ಸಂಸ್ಕರಣೆ, ಮೌಲ್ಯವರ್ಧನೆ ಮಾಡಿ ಮಾರುಕಟ್ಟೆ ಕಲ್ಪಿಸಿ ಆರ್ಥಿಕವಾಗಿ ಸದೃಢಗೊಳಿಸಲು ಎಫ್‌.ಪಿ.ಒ ಗಳ ಸಂಖ್ಯೆ ಹೆಚ್ಚಿಸಿ ಬ್ರ್ಯಾಡಿಂಗ್ ಮಾಡಬೇಕಿದೆ. ಇದಕ್ಕೆ ಬೇಕಿರುಬ ಅಗತ್ಯ ಸಹಕಾರ ನೀಡಲಾಗುವುದು ಎಂದರು.

ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕ ರಾಜ್ಯದಲ್ಲಿ ಯುರಿಯಾದ ಕೊರತೆ ಕಡಿಮೆಯಿದೆ. ಏಪ್ರಿಲ್ ನಿಂದ ಆಗಸ್ಟ್ ನಲ್ಲಿ ಬಿತ್ತನೆಯ ಸಂದರ್ಭದಲ್ಲಿ ಬೇಕಿರುವ ಅಗತ್ಯ ಯುರಿಯಾ ವನ್ನು ತೊಂದರೆಯಾಗದಂತೆ ರೈತರಿಗೆ ಒದಗಿಸಲು ಯೋಜನೆ ರೂಪಿಸಲಾಗಿದೆ ಎಂದರು.

ಕೃಷಿ ವಿಜ್ಞಾನಿಗಳು ಯುರಿಯಾದ ಹೆಚ್ವಿನ ಬಳಕೆಯಿಂದ ಮಣ್ಣ ಸತ್ವ ಕಳೆದುಕೊಂಡು ಇಳುವರಿ ಕಡಿಮೆಯಾಗುತ್ತದೆ. ಇದರ ಪರ್ಯಾಯವಾಗಿ ಉಪಯೋಗಿಸಬೇಕಿರುವ ಸಾವಯವ, ಹಸಿರೆಲೆ ಗೊಬ್ಬರದ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ. ಬದಲಾವಣೆ ಜಗದ ನಿಯಮ. ರೈತರು ಅರ್ಥ ಮಾಡಿಕೊಳ್ಳಬೇಕು ಎಂದರು.

ಕೃಷಿಯಲ್ಲಿ ನೀರನ್ನು ಮಿತಿಯಾಗಿ ಅಗತ್ಯಕ್ಕೆ ತಕ್ಕಂತೆ ಬಳಸಿದರೆ ಹಚ್ಚಿನ ಇಳುವರಿ ಪಡೆಯಬಹುದು.ರೈತರು ಬೇಕಿದ್ದರೆ ಇದನ್ನು ಪ್ರಯೋಗಿಕವಾಗಿ ಒಂದು ಎಕರೆಯಲ್ಲಿ ಮಿತಿಯಾಗಿ ನೀರು ಉಪಯೋಗಿಸಿ ಹಾಗೂ ಇನ್ನೊಂದು ಎಕರೆಯಲ್ಲಿ ಹೆಚ್ಚಾಗೊ ನೀರು ಬಳಸಿ ಎರಡು ಸ್ಥಳಗಳಲ್ಲಿ ಇಳುವರಿಯನ್ನು ತಾಳೆ ಮಾಡಿಕೊಳ್ಳಿ ಎಂದರು.

ಕಾರ್ಯಕ್ರಮದಲ್ಲಿ ಮಂಡ್ಯವಿಧಾನ ಸಭಾ ಕ್ಷೇತ್ರದ ಶಾಸಕ ಪಿ.ರವಿಕುಮಾರ್, ವಿಧಾನ ಪರಿಷತ್ ಶಾಸಕ ದಿನೇಶ್ ಗೂಳಿಗೌಡ, ಆಹಾರ ನಿಗನದ ಅಧ್ಯಕ್ಷ ಡಾ: ಕೃಷ್ಣ, ಮೈ ಶುಗರ್ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಸಿ‌.ಡಿ.ಗಂಗಾಧರ್, ಜಿಲ್ಲಾಧಿಕಾರಿ ಡಾ: ಕುಮಾರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಆರ್. ನಂದಿನಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಜಂಟಿ ಕೃಷಿ ನಿರ್ದೇಶಕ ಅಶೋಕ ಸೇರಿದಂತೆ ಇನ್ನಿತರೆ ಗಣ್ಯರು ಉಪಸ್ಥಿತರಿದ್ದರು.

Tags:
error: Content is protected !!