ಮಂಡ್ಯ: ಪ್ರತಿದಿನ ಯೋಗಾಭ್ಯಾಸವನ್ನು ಮಾಡುವುದರಿಂದ ಉತ್ತಮ ಆರೋಗ್ಯವನ್ನು ರೂಪಿಸಿಕೊಳ್ಳಬಹುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್ ಯತೀಶ್ ತಿಳಿಸಿದರು.
ಅವರು ಇಂದು(ಜೂ.19) ಮಂಡ್ಯ ನಗರದ ಪೊಲೀಸ್ ಪೆರೆಡ್ ಮೈದಾನದಲ್ಲಿ ನಡೆದ ಯೋಗೋತ್ಸವ ಕಾರ್ಯಕ್ರಮವನ್ನು ಕುರಿತು ಮಾತನಾಡಿದರು.
ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಸಂಬಂಧ ಇಂದು ಪೊಲೀಸ್ ಇಲಾಖೆಯ ಪೆರೆಡ್ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದ್ದ ಯೋಗೋತ್ಸವದಲ್ಲಿ ಸುಮಾರು 300 ಜನ ಪೊಲೀಸ್ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಸೇರಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಯುಕ್ತ ಯೋಗಾಭ್ಯಾಸ ಮಾಡಿದ್ದು ಬಹಳ ಖುಷಿಯಾಯಿತು ಇದೇ ರೀತಿ ಪ್ರತಿದಿನ ಕೂಡ ಯೋಗಾಭ್ಯಾಸವನ್ನು ಮಾಡಿ ಎಂದು ಸಲಹೆ ನೀಡಿದರು.
ಆರೋಗ್ಯದ ಕಡೆಗೆ ಹೆಚ್ಚಿನ ಒಲವು ಕೊಡಬೇಕು ಎಂಬ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು ಇನ್ನೂ ಹೆಚ್ಚಿನ ಸಾರ್ವಜನಿಕರು ಯೋಗಾಭ್ಯಾಸವನ್ನು ಮಾಡಿ ಉತ್ತಮ ಆರೋಗ್ಯವನ್ನು ವೃದ್ಧಿಸಿಕೊಳ್ಳಿ ಎಂದು ಹೇಳಿದರು.
ಮನುಷ್ಯನಿಗೆ ನೀರು ಅತಿಮುಖ್ಯವಾದ ಅಂಶ:ಡಾ. ಸೀತಾಲಕ್ಷ್ಮಿ
ದಿನ ನಿತ್ಯ ಜೀವನದಲ್ಲಿ ಸುಮಾರು ಜನರು ನೀರನ್ನು ಬಹಳ ಕಮ್ಮಿ ಕುಡಿಯುತ್ತಾರೆ ಇದರಿಂದ ಆರೋಗ್ಯದ ಸಮಸ್ಯೆಗಳು ಹೆಚ್ಚಾಗಿ ಕಾಡುತ್ತವೆ, ನೀರು ಕಡಿಮೆ ಕುಡಿಯುವುದರಿಂದ ಕಿಡ್ನಿಯಲ್ಲಿ ಸ್ಟೋನ್ ತೊಂದರೆ, ಸುಸ್ತು, ಆಯಾಸ ಮತ್ತು ಚರ್ಮದ ತೊಂದರೆಗಳು ಉಂಟಾಗುತ್ತದೆ. ಆದ್ದರಿಂದ ಒಂದು ಹೊತ್ತು ಊಟ ಕಡಿಮೆ ಮಾಡಿದರು ಕೂಡ ನೀರು ಕುಡಿಯುವುದನ್ನು ಕಮ್ಮಿ ಮಾಡಬಾರದು ನೀರು ಆರೋಗ್ಯಕ್ಕೆ ಬಹಳ ಮುಖ್ಯ ಎಂದು ಹೇಳಿದರು.
ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು ಎಂದರೆ ನಮ್ಮ ದಿನ ನಿತ್ಯ ಆಹಾರದ ಪದ್ದತಿಯಲ್ಲಿ ಹೆಚ್ಚಾಗಿ ನೀರು ಕುಡಿಯುವ ಅಭ್ಯಾಸ, ಹಸಿ ತರಕಾರಿ ಗಳು, ಹಣ್ಣು ಹಂಪಲು, ಮೊಳಕೆ ಕಟ್ಟಿದ ಕಾಳುಗಳನ್ನು ಹೆಚ್ಚಾಗಿ ಸೇವನೆ ಮಾಡಬೇಕು ಎಂದು ಹೇಳಿದರು.
ಮಾಂಸಹಾರ ಸೇವನೆ ಮಾಡುವುದು ತಪ್ಪಲ್ಲ ಆದರೆ ಪ್ರತಿದಿನ ಸೇವನೆ ಮಾಡುವುದು ಆರೋಗ್ಯಕ್ಕೆ ಹಾನಿಕಾರಕ ಆದ್ದರಿಂದ ಕಡಿಮೆ ಪ್ರಮಾಣದಲ್ಲಿ ಸೇವನೆ ಮಾಡಿ ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಎ ಎಸ್.ಪಿ ತಿಮ್ಮಯ್ಯ, ಡಿ.ವೈ.ಎಸ್.ಪಿ ಗಂಗಾಧರ ಸ್ವಾಮಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.