ಮಂಡ್ಯ: ಅಡುಗೆ ಮನೆಯ ಗ್ಯಾಸ್ ಸೋರಿಕೆಯಿಂದಾಗಿ ಅಡುಗೆ ಮನೆ ಸೇರಿದಂತೆ ಮನೆಯಲ್ಲಿದ್ದ ಎಲೆಕ್ಟ್ರಾನಿಕ್ ವಸ್ತುಗಳು ಸಂಪೂರ್ಣ ಭಸ್ಮವಾಗಿರುವ ಘಟನೆ ಶ್ರೀರಂಗಪಟ್ಟಣ ಟೌನ್ ಗಂಜಾಂನಲ್ಲಿ ನಡೆದಿದೆ.
ಇಂದು(ಮೇ.೧೨) ಬೆಳಿಗ್ಗಿನ ತಿಂಡಿಗೆಂದು ಅಡುಗೆ ಮಾಡುವ ವೇಳೆ ಬೆಂಕಿ ಹೊತ್ತಿದ್ದು, ಭಯಬೀತರಾದ ಮನೆಯವರು ತಕ್ಷಣ ಹೊರಗೆ ಓಡಿ ಬಂದು ಬಳಿಕ ಬೆಂಕಿ ನಂದಿಸಿದ್ದಾರೆ. ನಿಮಿಷಾಂಭ ದೇವಾಲಯದ ಅರ್ಚಕ ಸುಬ್ರಾಯ್‌ಭಟ್ ಅವರ ಮನೆಯಲ್ಲಿ ಈ ಘಟನೆ ಜರುಗಿದ್ದು, ಸಣ್ಣಪುಟ್ಟ ಗಾಯದೊಂದಿಗೆ ಅಡುಗೆ ಮನೆಯಲ್ಲಿಯೇ ಇದ್ದ ಅರ್ಚಕರು ಪಾರಾಗಿದ್ದಾರೆ.
ಅಡುಗೆ ಅನಿಲ ಸೋರಿಕೆಯಿಂದ ಈ ರೀತಿಯ ಅಹಿತಕರ ಘಟನೆಗಳು ಅಲ್ಲಲ್ಲಿ ವರದಿಯಾಗುತ್ತಲೇ ಇವೆ. ಬಹುತೇಕ ಸಂದಂರ್ಭದಲ್ಲಿ ಜನರ ಅಜಾಗೃಕತೆಯಿಂದಾಗಿ ಇಂತಹ ಅಹಿತಕರ ಘಟನೆ ಸಂಭಂವಿಸುತ್ತಿದೆ. ಗ್ರಾಮೀಣ ಭಾಗಗಳು ಸೇರಿದಂತೆ ಇತರೆಡೆ ಸರ್ಕಾರ ಹಾಗೂ ಅಡುಗೆ ಅನಿಲ ವಿತರಕ ಕಂಪನಿಗಳು, ಏಜೆನ್ಸಿಗಳು ಅಡುಗೆ ಅನಿಲ ಸುರಕ್ಷತೆ ಬಗ್ಗೆ ಇನ್ನೂ ಹೆಚ್ಚಿನ ಜಾಗೃತಿಗಳನ್ನು ಹಮ್ಮಿಕೊಳ್ಳಬೇಕಾಗಿದೆ.