Mysore
22
broken clouds
Light
Dark

ರಾಜ್ಯದಲ್ಲಿ ಮಾರಕ ಝೀಕಾ ವೈರಸ್‌ಗೆ ಮೊದಲ ಬಲಿ

ಬೆಂಗಳೂರು: ರಾಜ್ಯದಲ್ಲಿ ಡೆಂಗ್ಯೂ ಸಾವಿನ ನರ್ತನದ ನಡುವೆಯೇ ಝೀಕಾ ವೈರಸ್‌ ಕಾಟ ಶುರುವಾಗಿದ್ದು, ಇಂದು ಮೊದಲ ಸಾವಾಗಿದೆ.

ಶಿವಮೊಗ್ಗದಲ್ಲಿ 74 ವರ್ಷದ ವೃದ್ಧರೋರ್ವರು ಝೀಕಾ ವೈರಸ್‌ ಗುಣಲಕ್ಷಣ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆ ಬಳಿಕ ವೃದ್ಧನನ್ನು ಮನೆಗೆ ಕಳುಹಿಸಲಾಗಿತ್ತು.

ಶಿವಮೊಗ್ಗದ ವ್ಯಕ್ತಿ ಕಳೆದ ಜುಲೈ.5 ರಂದೇ ಸಾವನ್ನಪ್ಪಿದ್ದರು. ಝೀಕಾ ವೈರಸ್‌ಗೆ ಸಾವನ್ನಪ್ಪಿದ ಶಂಕೆ ವ್ಯಕ್ತಪಡಿಸಿದ್ದ ಆರೋಗ್ಯ ಇಲಾಖೆ ಸ್ಯಾಂಪಲ್‌ ಕಲೆ ಹಾಕಿತ್ತು. ಝೀಕಾ ವೈರಸ್‌ನಿಂದಲೇ ಸಾವನ್ನಪ್ಪಿರುವುದು ವರದಿಯಲ್ಲಿ ಪತ್ತೆಯಾಗಿದೆ.

ಶಿವಮೊಗ್ಗ ಗಾಂಧಿ ನಗರದ 74 ವರ್ಷದ ವೃದ್ಧ ಕಳೆದ ಜೂನ್‌ 19 ರಂದು ತೀವರ ಜ್ವರದಿಂದ ಬಳಲುತ್ತಿದ್ದರು. ಜೂನ್.‌21ರಂದು ಝೀಕಾ ವೈರಸ್‌ ಪತ್ತೆ ಆಗಿತ್ತು. ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ವೃದ್ಧನಿಗೆ ಚಿಕಿತ್ಸೆ ನೀಡಲಾಗಿತ್ತು. ಕುಟುಂಬಸ್ಥರು ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಮಾಡಿ ಮನೆಗೆ ಕರೆದುಕೊಂಡು ಹೋಗಿದ್ದರು. ಜ್ವರ ಮಾತ್ರವಲ್ಲದೇ ವಿವಿಧ ಕಾಯಿಲೆಗಳಿಂದ ಬಳಲುತ್ತಿದ್ದ ವೃದ್ಧ ಝೀಕಾ ವೈರಸ್‌ಗೆ ಸಾವನ್ನಪ್ಪಿದ್ದಾರೆ.

ಈ ಬಗ್ಗೆ ಆರೋಗ್ಯ ಇಲಾಖೆ ಮಾಹಿತಿ ನೀಡಿದ್ದು, ಜನತೆ ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಿದ್ದಾರೆ.