Mysore
27
scattered clouds

Social Media

ಶುಕ್ರವಾರ, 26 ಡಿಸೆಂಬರ್ 2025
Light
Dark

ಕೆಶಿಫ್ ಅಧಿಕಾರಿಗಳ ವಿರುದ್ಧ ರೈತರ ಆಕ್ರೋಶ

ಕೆ.ಆರ್.ಪೇಟೆ : ಭೂ ಸ್ವಾಧೀನಕ್ಕೆ ವೈಜ್ಞಾನಿಕ ಪರಿಹಾರ ನೀಡದೆ ಪೊಲೀಸರ ಸರ್ಪಗಾವಲಿನಲ್ಲಿ ಜಲಸೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಆರಂಭಿಸಿರುವ ಕೆಶಿಫ್ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ರೈತರು ಕಾಮಗಾರಿಗೆ ಅಡ್ಡಿಪಡಿಸಿ ಪ್ರತಿಭಟನೆ ನಡೆಸಿದ್ದಾರೆ

ಅಗ್ರಹಾರಬಾಚಹಳ್ಳಿ, ಬಿ.ಕೋಡಿಹಳ್ಳಿ, ಚಿಕ್ಕೋನಹಳ್ಳಿ ಹಾಗೂ ಕೆ.ಆರ್.ಪೇಟೆಯ ರೈತರು ಎತ್ತಿನಗಾಡಿ ಸಮೇತ ರಸ್ತೆಗಿಳಿದು ಕಾಮಗಾರಿಗೆ ಅಡ್ಡಿಪಡಿಸಿದರು.

ಅಗ್ರಹಾರಬಾಚಹಳ್ಳಿ ಬಳಿ ಹಾದು ಹೋಗಿರುವ ರಸ್ತೆಗೆ ಭೂಮಿ ನೀಡಿದ ರೈತರಿಗೆ ವೈಜ್ಞಾನಿಕ ಪರಿಹಾರ ನೀಡಬೇಕೆಂದು ರೈತರು ಒತ್ತಡ ಹಾಕುತ್ತಾ ಬಂದಿದ್ದರು, ಅಷ್ಟೇ ಅಲ್ಲದೆ ಪರಿಹಾರ ನೀಡದಿದ್ದರೆ ಕಾಮಗಾರಿಗೆ ಅವಕಾಶ ನೀಡುವುದಿಲ್ಲ ಎಂದು ಅಧಿಕಾರಿಗಳಿಗೆ ಎಚ್ಚರಿಸಿದ್ದರು.

ಶಾಸಕ ಎಚ್ ಟಿ ಮಂಜು ಸಹ ರೈತರಿಗೆ ವೈಜ್ಞಾನಿಕ ಪರಿಹಾರ ನೀಡಿ ಕಾಮಗಾರಿ ಆರಂಭಿಸಿ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದ್ದರು. ಆದರೆ ಇದ್ಯಾವುದನ್ನು ಲೆಕ್ಕಿಸದೆ ಕೆಶಿಫ್ ಮತ್ತು ಕಂದಾಯ ಅಧಿಕಾರಿಗಳ ತಂಡ ಪೋಲೀಸ್ ಸರ್ಪಗಾವಲಿನಲ್ಲಿ‌ ಶನಿವಾರ ಮುಂಜಾನೆ ರಸ್ತೆ ಕಾಮಗಾರಿ ಆರಂಭಿಸಿದ್ದಾರೆ.

ವಿಚಾರ ತಿಳದ ನೂರಾರು ರೈತರು ಎತ್ತಿನಗಾಡಿಗಳೊಂದಿಗೆ ಕಾಮಗಾರಿಗೆ ಅಡ್ಡಿ ಪಡಿಸಿ ಪ್ರತಿಭಟನೆ ಆರಂಭಿಸಿ ಪೊಲೀಸರ ಜೊತೆ ವಾಗ್ವಾದ ನಡೆದಿದ್ದು, ಸ್ಥಳದಲ್ಲಿ ವಾತಾವರಣ ನಿರ್ಮಾಣವಾಗಿದೆ.

ಕೇವಲ ಹತ್ತಿಪ್ಪತ್ತು ಸಾವಿರ ರೂ ಗಳಿಗೆ ಬಡ ರೈತರಿಂದ ಭೂಮಿ ಬರೆಸಿಕೊಂಡಿರುವ ಕೆಶಿಫ್ ಅಧಿಕಾರಿಗಳು, ಕೋರ್ಟ್ ಗೆ ದಾವೆ ಹಾಕಿದ ಶ್ರೀಮಂತ ರೈತರಿಗೆ ಗುಂಟೆಗೆ 3 ಲಕ್ಷ ರೂ ಪರಿಹಾರ ನೀಡಿದ್ದಾರೆ ಆದರೆ ನಮಗೆ ವಂಚನೆ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನಾ ನಿರತ ರೈತರ ಮೇಲೆ ಬಲಪ್ರಯೋಗಿಸಲು ಪೊಲೀಸರು ಮುಂದಾಗಿದ್ದು,ಇದಕ್ಕಾಗಿ ಹೆಚ್ಚಿನ ಸಂಖ್ಯೆಯ ಪೊಲೀಸರನ್ನು ಸ್ಥಳಕ್ಕೆ ಕರೆಸಲಾಗಿದೆ.

ರೈತರನ್ನು ಬಂಧಿಸಿ ಕರೆದೊಯ್ಯಲು ಹತ್ತಾರು ವಾಹನ ಸ್ಥಳದಲ್ಲಿದ್ದು, ಮತ್ತೊಂದೆಡೆ ಲಾಠಿ ಪ್ರಹಾರಕ್ಕೆ ಸಿದ್ಧತೆ ನಡೆದಿದೆ.ಸ್ಥಳದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿದ್ದು, ಅಧಿಕಾರಿ ಮತ್ತು ಪೊಲೀಸರ ವಿರುದ್ಧ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!