ಮಂಡ್ಯ: ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಜಯಂತಿ ನಗರದ ಬಳಿ ರೈತನೊಬ್ಬ ದರ ಕುಸಿತದಿಂದ ಕಂಗಾಲಾಗಿ ಕ್ಯಾಪ್ಸಿಕಂ ಗಿಡಗಳನ್ನು ಕಿತ್ತು ರಸ್ತೆ ಬದಿಗೆ ಎಸೆದಿದ್ದಾನೆ.
ಕೃಷಿ ಮಾರುಕಟ್ಟೆಯಲ್ಲಿ ತರಕಾರಿ ದರ ಕುಸಿತ ಆಗಿದ್ದು, ಅದರಲ್ಲೂ ವಿದೇಶಿ ತಳಿಯ ಕೆಂಪು ಬಣ್ಣದ ದಪ್ಪ ಮೆಣಸಿಕಾಯಿ ಬೆಳೆ ಕುಂಠಿತವಾಗಿದೆ. ಈ ಬೆಲೆ ಕುಸಿತದಿಂದ ಪಾಂಡವಪುರ ತಾಲ್ಲೂಕಿನ ಜಯಂತಿ ನಗರದ ಬಳಿಯ ರೈತನೋರ್ವ ದರ ಕುಸಿತದಿಂದ ಕಂಗಾಲಾಗಿ ಜಮೀನಿನಲ್ಲಿ ಬೆಳೆದಿದ್ದ ಕೆಂಪು ಬಣ್ಣದ ದಪ್ಪ ಮೆಣಸಿನ ಕಾಯಿ ಗಿಡಗಳನ್ನು ಬೇರು ಸಮೇತ ಕಿತ್ತು ರಸ್ತೆ ಬದಿಗೆ ಎಸೆದಿದ್ದಾನೆ.
ರಸ್ತೆ ಬದಿಯಲ್ಲಿ ಕೆಂಪು ಬಣ್ಣದ ದಪ್ಪ ಮೆಣಸಿನ ಕಾಯಿಗಳು ಕೊಳೆತು ಇದೀಗ ದುರ್ವಾಸನೆ ಬೀರುತ್ತಿದೆ. ಕಷ್ಟಪಟ್ಟು ಬೆಳೆದ ರೈತನ ಬದುಕಿನ ಜೊತೆ ದರ ಇಳಿಕೆ ಇದೀಗ ಆಘಾತ ತಂದಿದೆ.