ಮಂಡ್ಯ : ಕಾವೇರಿ ಕೊಳ್ಳದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಮಂಡ್ಯ-ಮೈಸೂರು ಸೇರಿದಂತೆ ಹಳೇ ಮೈಸೂರು ಭಾಗದ ಜೀವನಾಡಿಯಾಗಿರುವ ಕೃಷ್ಣರಾಜಸಾಗರ ಅಣೆಕಟ್ಟೆಯ ನೀರಿನ ಮಟ್ಟ 103.70 ಅಡಿಯನ್ನು ದಾಟಿದೆ.
ಕನ್ನಂಬಾಡಿ ಕಟ್ಟೆಗೆ 17 ಸಾವಿರಕ್ಕೂ ಅಧಿಕ ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಕೆಆರ್‍ಎಸ್ ಡ್ಯಾಂನ ನೀರಿನ ಮಟ್ಟ ಮತ್ತಷ್ಟು ಏರಿಕೆಯಾಗಿದೆ.
ಕೆಆರ್‍ಎಸ್ ಡ್ಯಾಂ 124.80 ಅಡಿ ಗರಿಷ್ಠ ಮಟ್ಟವನ್ನು ಹೊಂದಿದ್ದು, ಶನಿವಾರ 102.00 ಅಡಿ ಇದ್ದ ಡ್ಯಾಂನ ನೀರಿನ ಮಟ್ಟವು ಭಾನುವಾರ 103.70 ಅಡಿಗೆ ಏರಿಕೆಯಾಗಿದೆ. ಡ್ಯಾಂಗೆ 17,544 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಡ್ಯಾಂನಿಂದ 735 ಕ್ಯೂಸೆಕ್ ನೀರಿನ ಹೊರಹರಿವಿದೆ. 49.452 ಟಿಎಂಸಿ ಸಾಮರ್ಥ್ಯವಿರುವ ಡ್ಯಾಂನಲ್ಲಿ 25.851 ಟಿಎಂಸಿ ನೀರು ಸಂಗ್ರಹವಾಗಿದೆ. ಇದೀಗ ಜೂನ್ ತಿಂಗಳ ಮೊದಲ ದಿನವೇ ಡ್ಯಾಂ ಅರ್ಧದಷ್ಟು ಭರ್ತಿಯಾಗಿದೆ.





