Mysore
25
haze

Social Media

ಗುರುವಾರ, 11 ಡಿಸೆಂಬರ್ 2025
Light
Dark

ಧರ್ಮಸ್ಥಳ ಎಲ್ಲರಿಗೂ ಸೇರಿದ್ದೇ ಹೊರತು ಕೇವಲ ಬಿಜೆಪಿಯವರಿಗೆ ಮಾತ್ರವಲ್ಲ : ಶಾಸಕ ಗಣಿಗ ರವಿಕುಮಾರ್

p ravikumar

ಮಂಡ್ಯ : ಬಿಜೆಪಿಯವರಿಗೆ ದೇವಸ್ಥಾನ ತೋರಿಸಿ ಮತ ಕೇಳುವುದೇ ಬಂಡವಾಳವಾಗಿದೆ. ಇಂತಹ ನಾಟಕ ಮಾಡಿಯೇ ಅವರು ಚುನಾವಣೆಯಲ್ಲಿ ಸೋಲುವುದು ಎಂದು ಶಾಸಕ ಪಿ.ರವಿಕುಮಾರ್ ಗಣಿಗ ಆರೋಪಿಸಿದರು.

ಮಾಧ್ಯಮದವರೊಂದಿಗೆ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಸಂಬಂಧಿಸಿದಂತೆ ಬಿಜೆಪಿ ಹೋರಾಟದ ವಿಚಾರಕ್ಕೆ ಮಾತನಾಡಿದ ಅವರು, ಧರ್ಮಸ್ಥಳ ಎಲ್ಲರಿಗೂ ಸೇರಿದ್ದು. ಕಾಂಗ್ರೆಸ್‌ನವರು ಕೂಡ ಧರ್ಮಸ್ಥಳ ಯಾತ್ರೆಗೆ ಹೋಗಿದ್ದೇವೆ. ೨೦೨೩ರವರೆಗೆ ಬಿಜೆಪಿ ಸರ್ಕಾರ ಇತ್ತು. ಸೌಜನ್ಯ ಸಾವು ಪ್ರಕರಣ ಬಿಜೆಪಿ ಆಡಳಿತಾವಧಿಯಲ್ಲೇ ಇತ್ತು. ಆರ್.ಅಶೋಕ್ ಗೃಹ ಸಚಿವರಾಗಿದ್ದರು. ಆಗ ಏಕೆ ತನಿಖೆ ನಡೆಸಲಿಲ್ಲ? ನಮಗೂ ರಾಜಕಾರಣ ಮಾಡುವುದಕ್ಕೆ ಬರುತ್ತದೆ. ಆದ್ದರಿಂದ ಬಿಜೆಪಿ ಇಂತಹ ವಿಷಯದಲ್ಲಿ ರಾಜಕಾರಣ ಮಾಡಬಾರದು ಎಂದರು.

ಸೌಜನ್ಯ ಸತ್ತಿದ್ದಾರೆ, ಅದರ ತನಿಖೆ ಮಾಡಬೇಕಲ್ಲವೇ? ತನಿಖೆ ಮಾಡಿ ಎಂದು ಬಿಜೆಪಿಯವರೇ ಹೇಳಿದ್ದರು. ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಕುಟುಂಬದವರೇ ಅವರೇ ಮುಖ್ಯಮಂತ್ರಿಗಳಿಗೆ ಧನ್ಯವಾದ ತಿಳಿಸಿದ್ದಾರೆ. ಬಿಜೆಪಿಯವರು ಎಸ್‌ಐಟಿ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ. ತಲೆ ಬುರುಡೆ ಹಿಡ್ಕೊಂಡು ಬಂದ ಮೇಲೆ ತನಿಖೆ ಮಾಡಲೇಬೇಕು. ಈ ಹಿನ್ನೆಲೆಯಲ್ಲಿ ಅನಾಮಿಕನ ತನಿಖೆ ನಡೆಯುತ್ತಿದೆ. ಕಾನೂನು ಪಾರದರ್ಶಕವಾಗಿದೆ. ಲಕ್ಷಾಂತರ ಜನರನ್ನ ಕರೆದುಕೊಂಡು ಹೋಗಿ ಧರ್ಮಸ್ಥಳದಲ್ಲಿ ಡ್ರಾಮಾ ಮಾಡುವುದು ನಮಗೂ ಗೊತ್ತಿದೆ. ಜೈ ಜೈ ಎನ್ನುವುದಲ್ಲ, ಸತ್ತಿರುವವರಿಗೆ ನ್ಯಾಯ ಕೊಡಿಸಬೇಕು. ಧರ್ಮಸ್ಥಳದವರು ಮಾಡಿದ್ದಾರಾ?, ಉತ್ತರ ಬೇಕಲ್ಲಾ? ಸೌಜನ್ಯ ರೇಪ್ ಆಗಿ ಸತ್ತಿರುವುದಲ್ಲವೇ, ಈ ಪ್ರಕರಣವನ್ನು ಏಕೆ ಮಂಜುನಾಥನಿಗೆ ಹೋಲಿಸುತ್ತಿದ್ದಾರೆ? ಅಣ್ಣಪ್ಪನ ಶಾಪ ಬಿಜೆಪಿಯವರಿಗೆ ತಟ್ಟುತ್ತದೆ ಎಂದು ಹೇಳಿದರು.

ಸತ್ತಿರುವ ಹೆಣ್ಣು ಮಕ್ಕಳಿಗೆ ನ್ಯಾಯ ಕೊಡಿಸಲು ಎಸ್‌ಐಟಿ ರಚನೆ ಆಗಿದೆ. ಮಾಸ್ಕ್‌ಮ್ಯಾನ್ ಚಿನ್ನಯ್ಯನನ್ನು ತನಿಖೆ ಮಾಡಲಾಗುತ್ತಿದೆ. ಈಗ ನಾವು ಡ್ರಾಮಾ ಮಾಡಬೇಕಾ? ಧರ್ಮಸ್ಥಳ ಯಾತ್ರೆ ಮಾಡುತ್ತೇವೆಂದು ಸುಳ್ಳು ಹೇಳಬೇಕಾ? ಇದನ್ನು ಮಂಜುನಾಥಸ್ವಾಮಿ ಒಪ್ಪಲ್ಲ. ಬಿಜೆಪಿ ಈ ರೀತಿ ಡ್ರಾಮಾ ಮಾಡಿ ಚುನಾವಣೆಯಲ್ಲಿ ಸೋಲುತ್ತದೆ. ದೇವರ ಭಕ್ತಿ ಇದ್ದಿದ್ದರೆ ೨೫ ವರ್ಷ ಅಽಕಾರದಲ್ಲಿರಬೇಕಿತ್ತು. ಎಸ್‌ಐಟಿ ತನಿಖೆ ನಿಲ್ಲಿಸಿದರೆ ಮತ್ತೆ ಹೋರಾಟ ಮಾಡುತ್ತಾರೆ. ಬಿಜೆಪಿಯವರು ರಾಜಕಾರಣ ಮಾಡುತ್ತಾರೆ ಅಷ್ಟೆ. ಎಸ್‌ಐಟಿ ತನಿಖೆ ನಡೆಯುತ್ತಿದೆ, ರಾಜಕೀಯ ಬಿಟ್ಟು ಮಾತನಾಡಲಿ. ಧರ್ಮಸ್ಥಳದ ಬಗ್ಗೆ ಯಾವ ಪಕ್ಷವೂ ರಾಜಕಾರಣ ಮಾಡಬಾರದು ಎಂದು ಹೇಳಿದರು.

ಚುನಾವಣೆಗೆ ಮುನ್ನ ನಾನೇ ಬಸ್ ವ್ಯವಸ್ಥೆ ಮಾಡಿ ಧರ್ಮಸ್ಥಳಕ್ಕೆ ಜನರನ್ನ ಕರೆದುಕೊಂಡು ಹೋಗಿದ್ದೆ. ಬಿಜೆಪಿಯವರಿಗೆ ನಾಟಕವೇ ಬಂಡವಾಳ. ದೇವಸ್ಥಾನ ತೋರಿಸುವುದು ಮತ ಕೇಳುವುದು. ದೇವರ ಶಾಪದಿಂದ ನೀವು ಸೋಲೋದು. ೨೦೨೩ರವರೆಗೆ ಅವರದೇ ಸರ್ಕಾರ ಇತ್ತು. ತನಿಖೆ ಮಾಡಲು ಎನ್‌ಐಎಗೆ ಏಕೆ ಅಮೆರಿಕಾ ಏಜೆನ್ಸಿಗೆ ಕೊಡಬಹುದಿತ್ತು. ಮಾಸ್ಕ್‌ಮ್ಯಾನ್ ಎಸ್‌ಐಟಿ ವಶದಲ್ಲಿದ್ದಾನೆ. ಮಹೇಶ್ ಶೆಟ್ಟಿ ಮನೆ ಮೇಲೆ ದಾಳಿ ಆಗಿದೆ. ಸಮೀರ್ ತನಿಖೆ ಆಗುತ್ತಿದೆ. ಕಾನೂನು ಎಲ್ಲರಿಗೂ ಒಂದೇ. ಮಂಜುನಾಥ ಸ್ವಾಮಿಯನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿದ್ದೇವೆಂದು ಬಿಜೆಪಿ ಬಹಿರಂಗವಾಗಿ ಹೇಳಲಿ. ಕಾಂಗ್ರೆಸ್‌ಗೆ ಒಳ್ಳೆಯ ಹೆಸರು ಬರುತ್ತದೆ ಎಂದು ಬಿಜೆಪಿಯವರು ಸುಮ್ಮನೆ ನಾಟಕ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

Tags:
error: Content is protected !!