ಮಂಡ್ಯ : ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆಯ ಆರ್ಭಟ ಜೋರಾಗಿರುವ ಹಿನ್ನಲೆ ನದಿಪಾತ್ರದಲ್ಲಿ ಪ್ರವಾಹದ ಭೀತಿ ಶುರುವಾಗಿದೆ. ಶ್ರೀರಂಗಪಟ್ಟಣ ತಾಲೂಕಿನ ಕೆಆರ್ ಎಸ್ ಜಲಾಶಯ ಬಹುತೇಕ ಭರ್ತಿಯತ್ತ ತಲುಪಿದೆ. ಜಲಾಶಯದ ಭರ್ತಿಗೆ ಇನ್ನು ಎರಡು ಅಡಿ ಅಷ್ಟೇ ಬಾಕಿಯಿದ್ದು, ರೈತರ ಮೊಗದಲ್ಲಿ ಸಂತಸ ಮೂಡಿದೆ.
ಜಲಾಶಯದಿಂದ ನದಿಗೆ ೨೫ ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಡ್ಯಾಂ ಬಹುತೇಕ ಭರ್ತಿಯಾಗಿರುವ ಹಿನ್ನೆಲೆ ಹೊರ ಹರಿವು ಹೆಚ್ಚಿಸಲಾಗಿದೆ. ಸದ್ಯ ಡ್ಯಾಂ ಒಳಹರಿವು ಹೆಚ್ಚಳವಾಗಿದೆ. ಡ್ಯಾಂನಲ್ಲಿ ಒಳಹರಿವು ೬೯೬೧೭ ಕ್ಯೂಸೆಕ್ ಏರಿಕೆಯಾಗಿತ್ತು. ನಿನ್ನೆ ೫೧ ಸಾವಿರ ಕ್ಯೂಸೆಕ್ ಒಳಹರಿವು ಇತ್ತು. ಈಗಾಗಲೇ ೧೨೪.೮೦ ಅಡಿ ಗರಿಷ್ಠ ಸಾಮರ್ಥ್ಯವಿರುವ ಜಲಾಶಯದಲ್ಲಿ ೧೨೨.೭೦ ಅಡಿ ಭರ್ತಿಯಾಗಿದೆ. ಮಧ್ಯಾಹ್ನದ ವೇಳೆಗೆ ಹೊರಹರಿವಿನ ಪ್ರಮಾಣ ಮತ್ತಷ್ಟು ಹೆಚ್ಚಿಸುವ ಸಾಧ್ಯತೆ ಇದೆ.