Mysore
20
broken clouds

Social Media

ಶುಕ್ರವಾರ, 20 ಡಿಸೆಂಬರ್ 2024
Light
Dark

ಕಾಂಗ್ರೆಸ್‌ ಆಡಳಿತದ ಮೇಲೆ ವಿಶ್ವಾಸ ಕಳೆದುಕೊಂಡಿದೆ: ನಿಖಿಲ್ ಕುಮಾರಸ್ವಾಮಿ

ಮಂಡ್ಯ: ರಾಜ್ಯ ಕಾಂಗ್ರೆಸ್‌ ಸರ್ಕಾರ ತನ್ನ ಆಡಳಿತದ ಮೇಲೆ ವಿಶ್ವಾಸ ಕಳೆದುಕೊಂಡಿದೆ. ಹಾಗಾಗಿ ಅವರು ಯಾರನ್ನ ಮುಖ್ಯಮಂತ್ರಿ ಮಾಡುತ್ತಾರೋ, ಎಷ್ಟು ಜನ ಉಪಮುಖ್ಯಮಂತ್ರಿ ಮಾಡುತ್ತಾರೋ ನೋಡೋಣ ಎಂದು ಜೆಡಿಎಸ್‌ ಯುವ ಘಟಕದ ಅಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ವ್ಯಂಗವಾಡಿದರು.

ನಗರದಲ್ಲಿ ಇಂದು(ಜೂ.28) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ತನ್ನ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಬೆಲೆ ಹೆಚ್ಚಳ ಮಾಡಿದೆ. ರಾಜ್ಯದ ಅಭಿವೃದ್ಧಿ ಮರಿಚಿಕೆಯಾಗಿದೆ. ಜನರು ಗ್ಯಾರಂಟಿಗಳನ್ನು ಕೇಳಿಲ್ಲ. ಹಾಗಾಗಿ ಈ ಸರ್ಕಾರ ಹೆಚ್ಚು ದಿನ ಉಳಿಯೋದು ಕಷ್ಟ ಎಂದರು.

ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಅವರು ಈಗ ರಾಜ್ಯ ಹಾಗೂ ದೇಶದ ಅಭಿವೃದ್ಧಿ ಪರ ಕೆಲಸ ಮಾಡಬೇಕಿದೆ. ವಾರದಲ್ಲಿ ಒಂದು ದಿನ ಮಂಡ್ಯ ಜಿಲ್ಲೆಯ ಪ್ರವಾಸ ಕೈಗೊಂಡು, ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸುವರು ಎಂದು ಹೇಳಿದರು.

ಜಿಲ್ಲೆಯ ವಿಸಿ ನಾಲೆಗಳಿಗೆ ಕೆಆರ್‌ಎಸ್‌ನಲ್ಲಿ 80 ಅಡಿ ನೀರಿದ್ದಾಗಲೂ ನೀರು ಹರಿಸಿರುವ ಉದಾಹರಣೆ ಇದೆ. ಆದರೆ, ಇದೀಗ ನೀರಿದ್ದರೂ ನಾಲೆಗಳಿಗೆ ನೀರು ಹರಿಸಿಲ್ಲ. ಆದರೆ, ನಾವು ರೈತರ ಪರ ಇರುತ್ತೇವೆ ಎಂದರು.

ಈ ವೇಳೆ ಮುಖಂಡರಾದ ಡಿ.ಸಿ ತಮ್ಮಣ್ಣ, ಡಿ.ರಮೇಶ್‌, ಕಾಳೇಗೌಡ, ಬಿ.ಆರ್‌ ಸುರೇಶ್‌ ಹಾಗೂ ಸಾದೊಳಲು ಸ್ವಾಮಿ ಹಾಜರಿದ್ದರು.

Tags: