Mysore
21
broken clouds

Social Media

ಗುರುವಾರ, 01 ಜನವರಿ 2026
Light
Dark

ದಲಿತ ವ್ಯಕ್ತಿಯನ್ನು ಬಲವಂತವಾಗಿ ಇಸ್ಲಾಂಗೆ ಮತಾಂತರ : ಶಾಸಕನ ಆಪ್ತ ಅರೆಸ್ಟ್

ಬೆಂಗಳೂರು  26 ವರ್ಷದ ದಲಿತ ವ್ಯಕ್ತಿಯನ್ನು ಬಲವಂತವಾಗಿ ಇಸ್ಲಾಂಗೆ ಮತಾಂತರ ಮಾಡಿದ ಆರೋಪದ ಮೇಲೆ 55 ವರ್ಷದ ಬಿ ಬಿ ಎಂ ಪಿ ಮಾಜಿ ಕಾರ್ಪೊರೇಟರ್ ಸೇರಿದಂತೆ ಐವರನ್ನು ಬನಶಂಕರಿ ಪೊಲೀಸರು ಬಂಧಿಸಿದ್ದಾರೆ 26 ವರ್ಷದ ದಲಿತ ವ್ಯಕ್ತಿಯನ್ನು ಬಲವಂತವಾಗಿ ಇಸ್ಲಾಂಗೆ ಮತಾಂತರ ಮಾಡಿದ ಆರೋಪದ ಮೇಲೆ 55 ವರ್ಷದ ಬಿಬಿಎಂಪಿ ಮಾಜಿ ಕಾರ್ಪೊರೇಟರ್ ಸೇರಿದಂತೆ ಐವರನ್ನು ಬನಶಂಕರಿ ಪೊಲೀಸರು ಬಂಧಿಸಿದ್ದಾರೆ.

 

ಮಂಡ್ಯ ಜಿಲ್ಲೆಯ ಮದ್ದೂರಿನವರಾದ ಶ್ರೀಧರ್ ಗಂಗಾಧರ್ ಎಂದು ಗುರುತಿಸಲಾಗಿದ್ದು, ಆರೋಪಿಗಳು ಒತ್ತಾಯಿಸಿ ಇಸ್ಲಾಂಗೆ ಮತಾಂತರಿಸಿದ್ದಾರೆ ಎಂದು ಹೇಳಿಕೆ ನೀಡಿದ್ದರು. ಹುಬ್ಬಳ್ಳಿಯ ನವನಗರದ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಸೆ.9ರಂದು 12 ಆರೋಪಿಗಳ ವಿರುದ್ಧ ಮೊಕದ್ದಮೆ ದಾಖಲಾಗಿದ್ದು, ಇತ್ತೀಚೆಗೆ ಬನಶಂಕರಿ ಠಾಣೆಗೆ ವರ್ಗಾಯಿಸಲಾಗಿತ್ತು.ಬನಶಂಕರಿ ವಾರ್ಡ್‌ನ ಮಾಜಿ ಕಾರ್ಪೊರೇಟರ್ ಅನ್ಸಾರ್ ಪಾಷಾ ನಗರ ಶಾಸಕರೊಬ್ಬರ ಆಪ್ತರು ಎನ್ನಲಾಗಿದೆ.

 

ಕಾಂಗ್ರೆಸ್ ಪಕ್ಷದ ಕಾರ್ಪೊರೇಟರ್ ಆಗಿದ್ದ  ಅನ್ಸರ್ ಪಾಷಾ ಕೆಎಸ್ ಲೇಔಟ್ ನಿವಾಸಿಯಾಗಿದ್ದರು. ಈತನ ಸ್ನೇಹಿತ ಬನಶಂಕರಿ ನಿವಾಸಿ ನಯಾಜ್ ಪಾಷಾ ಹಾಗೂ ಕೆಎಸ್ ಲೇಔಟ್ ನಿವಾಸಿ ಹಾಜಿಸಾಬ್ ಅಲಿಯಾಸ್ ಶಮೀಮ್ ಶಾಲಿಕ್, ಮಂಡ್ಯದ ಅತ್ತಾವರ ರೆಹಮಾನ್ ಮತ್ತು ಕೆಎಸ್ ಲೇಔಟ್‌ನ ಶಬ್ಬೀರ್ ಖಾನ್ ಬಂಧಿತ ಆರೋಪಿಗಳಾಗಿದ್ದಾರೆ.ಐವರನ್ನೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!