ಮಂಡ್ಯ: ಜಿಲ್ಲೆಯ ನಾಗಮಂಗಲದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಎನ್ ಚಲುವರಾಯಸ್ವಾಮಿ ಮಂಡ್ಯ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಹೆಚ್‌ಡಿ ಕುಮಾರಸ್ವಾಮಿ ವಿರುದ್ಧ ಆದಿಚುಂಚನಗಿರಿಯ ನಿರ್ಮಲಾನಂದನಾಥ ಶ್ರೀಗಳ ಫೋನ್ ಟ್ಯಾಪ್ ಮಾಡಿಸಿದ್ದರು ಎಂದು ಗಂಭೀರ ಆರೋಪವನ್ನು ಮಾಡಿದ್ದಾರೆ.
ಹಿಂದೆ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ಆದಿಚುಂಚನಗಿರಿಯ ನಿರ್ಮಲಾನಂದನಾಥ ಶ್ರೀಗಳ ಫೋನ್ ಅನ್ನು ಟ್ಯಾಪ್ ಮಾಡಿಸಿದ್ದರು. ಈಗ ಹೇಗೆ ಹೋಗಿ ಆಶೀರ್ವಾದ ಕೇಳ್ತಾ ಇದ್ದಾರೆ. ನಾವೂ ಸಹ ಜೆಎಸ್‌ಎಸ್, ಸಿದ್ದಗಂಗಾ, ಚುಂಚನಗಿರಿ ಮಠಗಳಿಗೆ ಹೋಗಿದ್ದೇವೆ, ಅವರೂ ಹೋಗಿದ್ದಾರೆ, ಚುನಾವಣೆ ವೇಳೆ ಇದು ಸಹಜ ಎಂದರು.
ಕುಮಾರಸ್ವಾಮಿ ಸ್ವಾಮೀಜಿ ಫೋನ್ ಟ್ಯಾಪ್ ಮಾಡಿದ್ದಾರೆ. ಸ್ವಾಮೀಜಿಗಳು ಯಾರಿಗೂ ಪ್ರಚಾರ ಮಾಡೋಕೆ ಆಗಲ್ಲ. ಚುಂಚನಗಿರಿ ಮಠ ಒಕ್ಕಲಿಗ ಸಮುದಾಯದ ಮಠ ಆದರೂ ಸಹ ಅದು ರಾಜ್ಯದ ಅತ್ಯಂತ ಜಾತ್ಯಾತೀತ ಮಠ. ಎಲ್ಲಾ ಜಾತಿಗಳನ್ನು ಪ್ರೀತಿಸಿ ಬೆಳೆಸಿದ ಬಾಲಗಂಗಾಧರನಾಥ ಶ್ರೀಗಳಿಗೆ ಜೆಡಿಎಸ್ ಇಷ್ಟು ಕಿರುಕುಳ ಕೊಟ್ಟಿದೆ ಎಂದು ಗೊತ್ತಿದೆ. ಈಗ ಚುನಾವಣೆ ಬಂದಿದೆ, ಅದಕ್ಕೆ ಕುಮಾರಸ್ವಾಮಿ ಮಠಕ್ಕೆ ಹೋಗ್ತಾ ಇದ್ದಾರೆ ಅಷ್ಟೇ ಎಂದು ಚಲುವರಾಯಸ್ವಾಮಿ ಹೇಳಿದರು.