ಭಾರತೀನಗರ : ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಕ್ ಅವರು ಹಿಂದೂ ವಿರೋಧಿಯಾಗಿದ್ದಾರೆ. ಹೀಗಾಗಿ ಅವರಿಂದ ದಸರಾ ಉದ್ಘಾಟನೆ ಸರಿಯಲ್ಲ ಎಂದು ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.
ಈ ಕುರಿತು ಮಾತನಾಡಿರುವ ಅವರು, ನಾಡಹಬ್ಬ ದಸರಾವನ್ನು ಹಿಂದಿನಿಂದಲೂ ಪ್ರಗತಿಪರ ಚಿಂತಕರು, ಲೇಖಕರು, ಸಮಾಜ ಸುಧಾರಕರಿಂದ ಉದ್ಘಾಟನೆ ಮಾಡಿಸುತ್ತಾ ಬರಲಾಗುತ್ತಿದೆ. ಈ ಬಾರಿಯೂ ಅಂತರಾಷ್ಟ್ರೀಯ ಬೂಕರ್ ಪ್ರಶಸ್ತಿ ಗಳಿಸಿರುವ ಭಾನು ಮುಷ್ತ್ತಾಕ್ ಅವರನ್ನು ಆಯ್ಕೆ ಮಾಡಲಾಗಿದೆ. ಆದರೆ ಭಾನು ಮುಸ್ತಾಕ್ ಅವರು ಈ ಹಿಂದೆ ಚಾಮುಂಡಿ ತಾಯಿ, ಅರಿಸಿಣ ಕುಂಕುಮ, ನಾಡಧ್ವಜದ ಬಗ್ಗೆ ಲಘುವಾಗಿ ಮಾತನಾಡಿರುವುದು ಗಮನಿಸಿದರೆ ಅವರು ಹಿಂದೂ ಸಮಾಜದ ಬಗ್ಗೆ ಇರುವ ವಿರೋಧಿತನವನ್ನು ತೋರಿಸುತ್ತದೆ ಎಂದು ಹೇಳಿದರು.
ಈ ಬಗ್ಗೆ ಸರ್ಕಾರ ಸರಿಯಾದ ನಿರ್ಧಾರ ಕೈಗೊಳ್ಳಬೇಕು. ಹಿಂದೂ ವಿರೋಧಿ ಮನಸ್ಥಿತಿಯಿರುವ ಇಂತಹವರನ್ನು ನಾಡಹಬ್ಬ ದಸರಾ ಉದ್ಘಾಟನೆಗೆ ಆಹ್ವಾನಿಸುವ ನಿರ್ಧಾರ ಕೈಬಿಟ್ಟು, ಇನ್ನೂ ಉತ್ತಮರನ್ನು ಆಯ್ಕೆ ಮಾಡಬೇಕೇಂದು ಒತ್ತಾಯಿಸಿದರು.





