ಬೆಂಗಳೂರು: ಬೆಂಗಳೂರಿನ ಅಮೃತಹಳ್ಳಿಯ ಸಿಂಧಿ ಕಾಲೇಜು ಫೆಸ್ಟ್ ನಡೆಯುವಾಗ ಕಾಲೇಜಿನ ಆವರಣದಲ್ಲಿಯೇ ವಿದ್ಯಾರ್ಥಿಯೋರ್ವ ಸೆಕ್ಯೂರಿಟಿ ಗಾರ್ಡ್ ನನ್ನೇ ಚಾಕು ಇರಿದು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಬುಧುವಾರ(ಜು.3) ನಡೆದಿದೆ.
ಕಾಲೇಜು ಸೆಕ್ಯೂರಿಟಿ ಜೈಕಿಶೋರ್ ರಾಯ್ ಕೊಲೆಯಾದ ವ್ಯಕ್ತಿ. ವಿದ್ಯಾರ್ಥಿ ಭಾರ್ಗವ್ ಕೊಲೆ ಆರೋಪಿಯಾಗಿದ್ದಾನೆ. ಸದ್ಯ ಹತ್ಯೆಗೆ ಸಂಬಂಧಿಸಿದಂತೆ ವಿದ್ಯಾರ್ಥಿಯನ್ನು ಬಂಧಿಸಲಾಗಿದ್ದು, ಪೊಲೀಸರು ವಿಚಾರಣೆ ನಡೆಸಿದ್ದಾರೆ.
ಬುಧುವಾರ ಸಿಂಧಿ ಕಾಲೇಜಿನಲ್ಲಿ ಕಾಲೇಜುಡೇ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮ ಶುರುವಾಗಿ ಮುಗಿಯುವವರೆಗೂ ವಿದ್ಯಾರ್ಥಿಗಳು ಪದೇ ಪದೇ ಓಡಾಡದಂತೆ ಸೂಚಿಸಲಾಗಿತ್ತು. ಆದರೆ ಕೊಲೆ ಆರೋಪಿ ಭಾರ್ಗವ್ ಪದೇ ಪದೇ ಓಡಾಡುತ್ತಿದ್ದ. ಹೀಗಾಗಿ ಸೆಕ್ಯೂರಿಟಿ ಇದನ್ನ ಪ್ರಶ್ನಿಸಿ ವಾರ್ನ್ ಮಾಡಿದ್ದರು. ಯುವತಿಯರ ಮುಂದೆ ಪ್ರಶ್ನಿಸಿದ್ದಕ್ಕೆ ಕೋಪಗೊಂಡಿದ್ದ ಆರೋಪಿ ಭಾರ್ಗವ್ ಗಲಾಟೆಯಾದ ನಂತರ ಪಿಜೆಗೆ ತೆರಳಿ ಚಾಕು ತಂದಿದ್ದ. ಕೇವಲ 15 ಸೆಕೆಂಡ್‌ನಲ್ಲಿ ಐದಾರು ಬಾರಿ ಸೆಕ್ಯೂರಿಟಿ ಗಾರ್ಡ್ ಜೈಕಿಶೋರ್‌ರಾಯ್ ಎದೆಗೆ ಮನಸೋ ಇಚ್ಚೆ ಇರಿದು ಕೊಲೆ ಮಾಡಿದ್ದಾನೆ.
ಸದ್ಯ ಅಮೃತಹಳ್ಳಿ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.





