Mysore
28
clear sky

Social Media

ಮಂಗಳವಾರ, 03 ಮಾರ್ಚ್ 2026
Light
Dark

ಕೆಆರ್‌ಎಸ್‌ಗೆ ಬಾಗಿನ: ಸಚಿವ ಸಹೋದ್ಯೋಗಿಯೊಂದಿಗೆ ಒಂದೇ ಬಸ್ಸಿನಲ್ಲಿ ಆಗಮಿಸಿದ ಸಿಎಂ

ಮಂಡ್ಯ: ಕೆಆರ್‌ಎಸ್‌ ಅಣೆಕಟ್ಟು ಭರ್ತಿಯಾಗಿರುವ ಹಿನ್ನೆಲೆ ಇಂದು(ಜು.29) ಸಿಎಂ ಸಿದ್ದರಾಮಯ್ಯ ಕಾವೇರಿ ನದಿಗೆ ಬಾಗಿನ ಅರ್ಪಿಸಿದ್ದಾರೆ.

ಬಾಗಿನ ಅರ್ಪಿಸಲು ಮೈಸೂರಿನಿಂದ ಸಿಎಂ ಸಿದ್ದರಾಮಯ್ಯ ತಮ್ಮ ಸಚಿವ ಸಂಪುಟ ಸಹೋದ್ಯೋಗಿಗಳ ಜೊತೆ ಒಂದೇ ಬಸ್ಸಿನಲ್ಲಿ ಕೆಆರ್‌ಎಸ್‌ಗೆ ಆಗಮಿಸಿದರು.

ಕೆಆರ್‌ಎಸ್‌ ಮುಖ್ಯ ದ್ವಾರಕ್ಕೆ ಆಗಮಿಸಿದ ಸಿಎಂ ಸಿದ್ದರಾಮಯ್ಯ ಪೊಲೀಸರಿಂದ ಗೌರವ ವಂದನೆ ಸ್ವೀಕರಿಸಿದರು. ಬಳಿಕ ಸಿಎಂ ಹಾಗೂ ಸಚಿವರಿಗೆ ಮಂಡ್ಯ ಜಿಲ್ಲಾಡಳಿತ ಹಾಗೂ ಕಾವೇರಿ ನೀರಾವರಿ ನಿಗಮದ ವತಿಯಿಂದ ಅಭೂತಪೂರ್ವ ಸ್ವಾಗತ ಕೋರಲಾಯಿತು.

ಕೆಆರ್‌ಎಸ್‌ ಮುಖ್ಯ ದ್ವಾರದಿಂದ ಕಾಲ್ನಡಿಯಲ್ಲೇ ಬಾಗಿನ ಸಲ್ಲಿಸಲು ಆಗಮಿಸಿದ ಸಿಎಂ ಹಾಗೂ ಸಚಿವರುಗಳಿಗೆ ಡೊಳ್ಳು ಕುಣಿತ, ಜಾನಪದ ಕಲಾತಂಡಗಳು ಸ್ವಾಗತ ಕೋರಿದವು.

ಬಳಿಕ ಅರ್ಚಕ ಭಾನುಪ್ರಕಾಶ್‌ ಶರ್ಮಾ ಅವರ ನೇತೃತ್ವದಲ್ಲಿ ಕಾವೇರಿಗೆ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿದರು. ಈ ವೇಳೆ ಡಿಸಿಎಂ ಡಿಕೆ ಶಿವಕುಮಾರ್‌, ಸಚಿವರಾದ ಎನ್.ಚಲುವರಾಯಸ್ವಾಮಿ, ಡಾ.ಹೆಚ್.ಸಿ.ಮಹಾದೇವಪ್ಪ, ಕೆ.ವೆಂಕಟೇಶ್, ಶಾಸಕರಾದ ಪಿ.ಎಂ. ನರೇಂದ್ರ ಸ್ವಾಮಿ, ಎ.ಬಿ.ರಮೇಶ್ ಬಂಡಿಸಿದ್ದೇಗೌಡ, ಹರೀಶ್ ಗೌಡ, ತನ್ವೀರ್ ಸೇಠ್, ಡಿ. ರವಿಶಂಕರ್ ಮತ್ತಿತರರ ಸಾಥ್ ನೀಡಿದರು.

Tags:
error: Content is protected !!