ಮಂಡ್ಯ : ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಕಡಿಮೆಯಾದ ಪರಿಣಾಮ ಕೆಆರ್‌ಎಸ್ ಡ್ಯಾಂಗೆ ಹರಿದು ಬರುತ್ತಿದ್ದ ನೀರಿನ ಒಳಹರಿವಿನ ಪ್ರಮಾಣ ಮತ್ತೆ ಕುಸಿತ ಕಂಡಿದೆ.
ಇಂದಿನ ಒಳಹರಿವು 5861 ಕ್ಯೂಸೆಕ್ ಆಗಿದ್ದು, ಮಂಗಳವಾರ 11,800 ಕ್ಯೂಸೆಕ್ ಮತ್ತು ಬುಧವಾರ 9,052 ಕ್ಯೂಸೆಕ್ ಒಳ ಹರಿವು ಇತ್ತು. ಕಳೆದ ಮೂರು ದಿನಗಳಿಂದ ಒಳಹರಿವಿನ ಪ್ರಮಾಣ ಹೆಚ್ಚಿದ್ದರಿಂದ ಡ್ಯಾಂ ನೀರಿನ ಮಟ್ಟ 100 ಅಡಿಗಳಷ್ಟು ಏರಿಕೆ ಕಂಡಿತ್ತು. ಅಷ್ಟರಲ್ಲೇ ಈಗ ಮತ್ತೆ ಒಳಹರಿವು ಕುಸಿದಿದೆ.
ಕೆಲವು ದಿನಗಳಿಂದ 97 ಅಡಿಗೆ ಕುಸಿದಿದ್ದ ನೀರಿನ ಮಟ್ಟ. 20 ಟಿಎಂಸಿಯಿಂದ 23 ಟಿಎಂಸಿಗೆ ಏರಿಕೆಯಾಗಿದೆ. ಪ್ರಸ್ತುತ ಡ್ಯಾಂನಿಂದ ತಮಿಳುನಾಡಿಗೆ 1489 ಕ್ಯೂಸೆಕ್ ಬಿಡುಗಡೆ ಮಾಡಲಾಗುತ್ತಿದೆ.