ಮಂಡ್ಯ : ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪ ಹೊತ್ತಿರುವ ಮಂಡ್ಯ ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಇಂಜಿನಿಯರ್ ಹೆಚ್ ಆರ್ ಹರ್ಷ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ.
ಈ ಕುರಿತು ಮಾರ್ಚ್ ೨೬ರಂದು ಲೋಕೋಪಯೋಗಿ ಇಲಾಖೆಯ ಅಧೀನ ಕಾರ್ಯದರ್ಶಿ ಮುರಳೀಧರನ್ ಎಸ್.ತಳ್ಳಿಕೇರಿ ಅವರು ಅಧಿಕಾರಿ ಹರ್ಷ ಅವರನ್ನು ಅಮಾನತುಗೊಳಿಸಿ ಆದೇಶಿಸಿದ್ದಾರೆ.
ಕಳೆದ ಜ.೩೦ ರಂದು ಲೋಕಾಯುಕ್ತ ಪೊಲೀಸರು ಅಧಿಕಾರಿ ವಿರುದ್ಧ ದಾಖಲಿಸಿರುವ ಕ್ರಿಮಿನಲ್ ಮೊಕದ್ದಮೆಯ ಪ್ರಾಥಮಿಕ ವರದಿಯಲ್ಲಿ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿರುವುದು ಸಾಬೀತಾಗಿದೆ ಎಂದಿದ್ದಾರೆ.
ಅಧಿಕಾರಿ ಹೆಚ್ ಆರ್ ಹರ್ಷ ಅವರು ಪರಿಶೀಲನಾ ಅವಧಿಯಲ್ಲಿ ರೂ 1.40ಕೋಟಿ ಆದಾಯ, ರೂ ೧,25,50,336 ಖರ್ಚು,,, ರೂ 14,45,669 ಉಳಿತಾಯ ಹೊಂದಿರುತ್ತಾರೆ. ಆದರೆ ತನಿಖೆ ವೇಳೆ ರೂ 3,32,೮೭,೯೯೭ ಆಸ್ತಿಯಲ್ಲಿ ರೂ 3,18,38,333 ಅಂದರೆ ಆದಾಯಕ್ಕಿಂತ ಶೇ. ೨೨೭.೪೧ರಷ್ಟು ಹೆಚ್ಚುವರಿ ಅಕ್ರಮ ಆಸ್ತಿ ಹೊಂದಿದ್ದಾರೆ ಎಂದು ಲೋಕಾಯುಕ್ತ ಪೊಲೀಸರು ಆರೋಪಿಸಿದ್ದಾರೆ.
ಲೋಕಯುಕ್ತ ತನಿಖೆ ಹಿನ್ನಲೆಯಲ್ಲಿ ಅಧಿಕಾರಿ ಹೆಚ್ ಆರ್ ಹರ್ಷ ಅವರನ್ನು ವಿಚಾರಣೆ ಬಾಕಿ ಇರಿಸಿ ಭ್ರಷ್ಟಚಾರ ಪ್ರತಿಬಂಧಕ ಕಾಯ್ದೆ 1988 ಕಲಂ ೧೩(1) (ಬಿ) ರಡಿ ಕ್ರಿಮಿನಲ್ ಮೊಕದ್ದಮೆ ಹಾಗೂ ಇಲಾಖೆ ವಿಚಾರಣೆಯನ್ನು ಬಾಕಿ ಇರಿಸಿ ಕರ್ನಾಟಕ ನಾಗರೀಕ ಸೇವಾ ನಿಯಮಗಳು ೧೯೫೭ರ ನಿಯಮ ೧೦(೧) (ಎಎ) ರನ್ವಯ ತಕ್ಷಣವೇ ಜಾರಿಗೆ ಬರುವಂತೆ ಸೇವೆಯಿಂದ ಅಮಾನತುಗೊಳಿಸಿ ಆದೇಶ ಹೊರಡಿಸಿದೆ.