ಮಂಡ್ಯ: ಲೋಕಾಯುಕ್ತ ಅಧಿಕಾರಿಗಳ ಪೋಸ್ಟಿಂಗ್ ಸಿಎಂ ಸಿದ್ದರಾಮಯ್ಯರ ಕೈಲಿದೆ ಎಂಬ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ.
ಈ ಕುರಿತು ಮಂಡ್ಯದಲ್ಲಿ ಮಾತನಾಡಿದ ಅವರು, ಮುಡಾ ಕೇಸನ್ನು ಸಿಬಿಐಗೆ ವಹಿಸೋದು ಬೇಡ ಅಂತ ಕೋರ್ಟ್ ರಿಜೆಕ್ಟ್ ಮಾಡಿತು. ಇದರ ಅರ್ಥ ಏನು? ಇದೆಲ್ಲ ಎಲ್ಲರಿಗೂ ಗೊತ್ತಿರುವ ಸತ್ಯ. ಇಡಿ ಬಿಜೆಪಿ ಕೈಕೆಳಗಿದೆ. ಒಂದು ವೇಳೆ ಇಡಿ ತನಿಖೆ ಮಾಡಿಸಿದ್ರು ಅದರಿಂದ ಹೊರ ಬರಲಿದ್ದೇವೆ. ಬಿಜೆಪಿಯವರು ಸಿದ್ದರಾಮಯ್ಯ ಯಾವ ಭ್ರಷ್ಟಾಚಾರದಲ್ಲೂ ಸಿಗುತ್ತಿಲ್ಲ ಎಂದು ಹುಡುಕ್ತಿದ್ದಾರೆ. ಇಡಿ, ಸಿಬಿಐ, ಲೋಕಾಯುಕ್ತದಲ್ಲಿ ತನಿಖೆ ಮಾಡಿದ್ರು ಏನು ಸಿಗಲ್ಲ ಎಂದರು.
ಇನ್ನು ಸಿಎಂ ಹಾಗೂ ರಾಜ್ಯಪಾಲರ ನಕಲಿ ಪತ್ರ ಸೃಷ್ಟಿಸಿ ಕೋಟ್ಯಾಂತರ ರೂ ವಂಚನೆ ಮಾಡಿರುವ ಪ್ರಕರಣದ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ವೆಂಕಟೇಶ್ ಅರೆಸ್ಟ್ ಆಗಿದ್ದಾನೆ. 100% ಈ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಲಾಗಿದೆ. ಆರೋಪಿ ಮೇಲೆ ಕಠಿಣ ಕ್ರಮ ಜರುಗಲಿದೆ ಎಂದರು.





