Mysore
19
scattered clouds

Social Media

ಬುಧವಾರ, 15 ಜನವರಿ 2025
Light
Dark

ಆರತಿ ಉಕ್ಕಡದಲ್ಲಿ ʻತಡೆ‌ʼ ಒಡೆಸಿದ ನಟ ದರ್ಶನ್

ಶ್ರೀರಂಗಪಟ್ಟಣ: ತಾಲೂಕಿನ ಆರತಿ ಉಕ್ಕಡದ ಅಹಲ್ಯಾದೇವಿ ಮಾರಮ್ಮ ದೇವಾಲಯಕ್ಕೆ ನಟ ದರ್ಶನ್ ಬುಧವಾರ ಕುಟುಂಬ ಸದಸ್ಯರೊಂದಿಗೆ ಭೇಟಿ ನೀಡಿದರು.

ಪತ್ನಿ ವಿಜಯಲಕ್ಷ್ಮಿ, ಪುತ್ರ ವಿನೇಶ್‌, ಶಾಸಕ ದರ್ಶನ್‌ ಪುಟ್ಟಣ್ಣಯ್ಯರೊಂದಿಗೆ ದೇಗುಲಕ್ಕೆ ಭೇಟಿ ನೀಡಿದ ದರ್ಶನ್ ದೇವಿ ಮಾರಮ್ಮನಿಗೆ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ದೋಷ ನಿವಾರಣೆಗೆ ತಡೆ ಒಡೆಸಿದರು.

ದರ್ಶನ್‌ ಒಳಿತಿಗೆ ಬಯಸಿ ಅವರ ಕುಟುಂಬದವರು ಅಹಲ್ಯಾದೇವಿ ಮಾರಮ್ಮನಿಗೆ ಹರಕೆ ಹೊತ್ತಿದ್ದರು. ಅದರಂತೆ ಹರಕೆ ತೀರಿಸಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

ಸೆಲ್ಫಿಗೆ ನೂಕು ನುಗ್ಗಲು
ದರ್ಶನ್‌ ದೇವಾಯಲಕ್ಕೆ ಭೇಟಿ ನೀಡುತ್ತಿರುವುದು ತಿಳಿದ ಅಭಿಮಾನಿಗಳು ನಟನ ಜೊತೆಗೆ ಸೆಲ್ಫಿಗೆ ನೂಕು ನುಗ್ಗಲು ಉಂಟು ಮಾಡಿದರು. ಪೋಟೊ ತೆಗೆಸಿಕೊಳ್ಳಲು ಪ್ರಯತ್ನಿಸಿದರು ಆದರೆ ಪೊಲೀಸರು ಅವಕಾಶ ನೀಡಲಿಲ್ಲ.

Tags: