ಮಂಡ್ಯ : ಶಕ್ತಿ, ಯುಕ್ತಿಗಳ ನಡುವೆ ಭಾರತ ತನ್ನ ಜ್ಞಾನದಿಂದ ಜಗತ್ತನ್ನು ಒಂದುಗೂಡಿಸುವ ಸಂಕಲ್ಪ ಮಾಡುತ್ತಿದೆ ಎಂದು ಮೈಸೂರು ವಿಭಾಗ ಕಾರ್ಯವಾಹಎಸ್.ಎಂ. ಮಹೇಶ್ ಅಭಿಪ್ರಾಯಿಸಿದರು.
ಮೈಸೂರು ವಿಭಾಗದ ಉದ್ಯೋಗಿ ಮತ್ತು ಮಂಡ್ಯ ಜಿಲ್ಲಾ ವಿದ್ಯಾರ್ಥಿ ಪ್ರಾಥಮಿಕ ಶಿಕ್ಷಾ ವರ್ಗದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಅಮೆರಿಕಾ ಶಕ್ತಿಯಿಂದ ವಿಶ್ವದ ದೊಡ್ಡಣ್ಣನಾಗಿ ಮೆರೆಯಲು ಯತ್ನಿಸಿದರೆ, ಬ್ರಿಟನ್ ಬುದ್ಧಿವಂತಿಕೆಯಿಂದ ಹಾಗೂ ಚೀನಾ ವ್ಯಾಪಾರವನ್ನು ವಿಸ್ತರಿಸುವ ಮೂಲಕ ಪ್ರಬಲ ರಾಷ್ಟ್ರವಾಗಲು ಯತ್ನಿಸಿದ್ದವು.ಆದರೆ ಭಾರತ ತನ್ನ ಸಂಸ್ಕøತಿ, ಪರಂಪರೆಯ ಜ್ಞಾನದಿಂದಲೇ ವಿಶ್ವವನ್ನು ಒಗ್ಗೂಡಿಸುವ ಕೆಲಸ ಮಾಡುತ್ತಿದೆ ಎಂದು ಉದಾಹರಣೆ ಸಮೇತ ವಿವರಿಸಿದರು.
ರಾಮನ ಆದರ್ಶ ಆಡಳಿತ, ಕೃಷ್ಣನ ಧರ್ಮದ ಆಡಳಿತವನ್ನು ಕಂಡಿರುವ ಭರತ ಖಂಡದ ಇತ್ತೀಚಿನ ದಿನಗಳಲ್ಲಿ ವಿಕೃತ ಮನಸ್ಸಿನ ಶಕ್ತಿಗಳು ವಿಧ್ವಂಸಕ ಕೃತ್ಯಗಳನ್ನು ಮಾಡುತ್ತಿವೆ. ಹಿಂದೂ ಧರ್ಮವನ್ನು ಒಡೆದು ಮತಾಂತರದಂತಹ ಪಿಡುಗನ್ನು ನಮ್ಮ ನೆಲದಲ್ಲಿ ಪ್ರತಿಷ್ಠಾಪಿಸಲು ಮುಂದಾಗಿವೆ. ಇದರಿಂದ ನಮ್ಮ ಆಚರಣೆಗಳು, ಪರಂಪರೆಗಳ ಮೇಲೂ ಹೊಡೆತ ಬೀಳುತ್ತಿದೆ. ಅವಿಭಕ್ತ ಕುಟುಂಬಗಳೆಲ್ಲವೂ ವಿಭಕ್ತ ಕುಟುಂಬಗಳಾಗಿವೆ. ವಿದೇಶಿ ಮನಸ್ಥಿತಿಗೆ ದಾಸರಾಗುತ್ತಿರುವುದೇ ಇದಕ್ಕೆ ಕಾರಣವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.





