Mysore
20
overcast clouds
Light
Dark

ಮತದಾನದಹಬ್ಬಕ್ಕೆ ಮದುವೆಮನೆಯಂತೆ ಸಿಂಗಾರಗೊಂಡ ಮತಗಟ್ಟೆ

ಮೇಲುಕೋಟೆ : ಚೆಲುವನಾರಾಯಣಸ್ವಾಮಿ ಸನ್ನಿಧಿಯಿರುವ ರಾಮಾನುಜಾಚಾರ್ಯರ ಕರ್ಮಭೂಮಿ ಮೇಲುಕೋಟೆಯ ಗ್ರಾಮಪಂಚಾಯಿತಿ ಕಛೇರಿಯಲ್ಲಿ ಸ್ಥಾಪಿಸಿರುವ ಪ್ರಥಮ ಮತಗಟ್ಟೆ (ಭಾಗದ ಸಂಖ್ಯೆ 28) ಸಾಂಪ್ರದಾಯಿಕ ಮತಗಟ್ಟೆಯಾಗಿ ಸಿಂಗಾರಗೊಂಡು ಮತದಾರರನ್ನು ಆಕರ್ಷಿಸುತ್ತಿದೆ.
ಮೇಲುಕೋಟೆ ಐತಿಹಾಸಿಕ ಕ್ಷೇತ್ರವಾಗಿದ್ದು ಸ್ಮಾರಕಗಳ ತವರೂರಾಗಿದೆ ಇಲ್ಲಿನ ಭಾಗದ ಸಂಖ್ಯೆ 28ರ ಪ್ರಥಮ ಮತಗಟ್ಟೆಯಲ್ಲಿ ಸಾಂಪ್ರದಾಯಿಕ ಶೈಲಿಯಲ್ಲಿ ಜೀವನ ನಿರ್ವಹಿಸುತ್ತಿರುವ ಮತದಾರರೇ ಹೆಚ್ಚಿರುವ ಕಾರಣ ಭಾರತ ಚುನಾವಣಾ ಆಯೋಗ ಸಾಂಪ್ರದಾಯಿಕ ಮತಗಟ್ಟೆಯಾಗಿ ಸಜ್ಜುಗೊಂಡಿದೆ ಮತಗಟ್ಟೆಯ ಮುಂದೆ ರಂಗವಲ್ಲಿ ತಳಿರು ತೋರಣ ಬಾಳೆಕಂದುಗಳಿಂದ ಕೂಡಿದ ಹಸಿರು ಚಪ್ಪರವನ್ನು ಹಾಕಿ ಹೂವಿನಿಂದ ಸಿಂಗಾರ ಮಾಡಲಾಗಿದೆ. ಮತಗಟ್ಟೆ ಒಂದು ಕಡೆ ಭವ್ಯರಾಯಗೋಪುರದ ಚಿತ್ರ ಮತ್ತೊಂದೆಡೆ ಯೋಗನರಸಿಂಹಸ್ವಾಮಿ ಬೆಟ್ಟದ ದೃಶ್ಯ ಬಿಡಿಸಲಾಗಿದೆ.
ಇದರಜೊತೆಗೆ ಜನಪದ ಕಲೆಗಳ ಚಿತ್ತವನ್ನೂ ಬಿಡಿಸಿದ್ದು ಮತಗಟ್ಟೆ ವಿಳಾಸ ಬಿ.ಎಲ್.ಒ ವಿವರ ನಮೂದಿಸಲಾಗಿದೆ 24 ಗಂಟೆಯೂ ಮೇಲಧಿಕಾರಿಗಳು ಮತಗಟ್ಟೆಯನ್ನು ವೀಕ್ಷಿಸಲು ಅನುವಾಗುವಂತೆ ಆನ್ ಲೈನ್ ಸಿಸಿ ಕ್ಯಾಮರಾ ಅಳವಡಿಸಲಾಗಿದ್ದು ಮತದಾನದಹಬ್ಬಕ್ಕೆ ಮದುವೆಮನೆಯಂತೆ ಸಿದ್ಧವಾಗಿದೆ.
ಚುನಾವಣಾ ಆಯೋಗದ ನಿರ್ದೇಶನದಂತೆ ಸಾಂಪ್ರದಾಯಿಕ ಮತಗಟ್ಟೆ ಸ್ಥಾಪಿಸಲಾಗಿದ್ದು, ಮೇಲುಕೋಟೆ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತಗಟ್ಟೆಗೆ ಬಂದು ಮತದಾನ ಮಾಡಬೇಕು ಮತದಾನಕ್ಕೆ ಬೇಕಾದ ಎಲ್ಲಾ ಪೂರಕ ವ್ಯವಸ್ಥೆಗಳನ್ನು ಅಚ್ಚುಕಟ್ಟಾಗಿ ಮಾಡಲಾಗಿದೆ ಹೆಚ್ಚಿನ ಪೊಲೀಸ್ ಬಂದೂಬಸ್ತ್ ಇರುತ್ತದೆ ಎಂದು ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಾಜೇಶ್ವರ್ ಹಾಗೂ ಮತಗಟ್ಟೆ ಅಧಿಕಾರಿ ಸಂತನಾನರಾಮನ್ ತಿಳಿಸಿದರು.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ