ಕೆ.ಆರ್.ಪೇಟೆ : ಪಟ್ಟಣದ ದೇವಿರಮ್ಮಣ್ಣಿ ಕೆರೆಯಲ್ಲಿ ಸೋಮವಾರ ಮುಂಜಾನೆ ಮೀನು ಹಿಡಿಯಲು ಹೋದ ಮೀನುಗಾರ ರಾಮಚಂದ್ರನಾಯಕ ಎಂಬವರ ಬಲೆಗೆ ಅಪರೂಪದ ಬಂಗಾರದ ಬಣ್ಣದ ಮೀನು ಸಿಕ್ಕಿದೆ.
ವಿಷಯ ತಿಳಿಯುತ್ತಲೇ ಸುತ್ತಮುತ್ತಲ ಜನತೆ ಮೀನನ್ನು ನೋಡಲು ಮುಗಿಬಿದ್ದರು. ಈ ಬಂಗಾರದ ಬಣ್ಣದ ಮೀನು ನಾಲ್ಕು ಕೆ.ಜಿ. ತೂಕವಿದ್ದು, ಇದನ್ನು ಗೌರಿ ಮೀನು ಎನ್ನಲಾಗುತ್ತದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಇದೊಂದು ಅಪರೂಪದ ತಳಿಯಾಗಿದ್ದು, ವಳಗೆರೆ ಮೆಣಸ ಗ್ರಾಮದ ರಾಜು ಎಂಬವರು ನಾಲ್ಕು ಕೆ.ಜಿ. ತೂಕವಿದ್ದ ಗೌರಿ ಮೀನನ್ನು ಒಂದು ಸಾವಿರ ರೂ. ನೀಡಿ ಖರೀದಿಸಿದ್ದಾರೆ. ಬಂಗಾರ ಬಣ್ಣದ ಗೌರಿ ಮೀನು ಮುಳ್ಳುಗಳಿಲ್ಲದೆ ತಿನ್ನಲು ರುಚಿಕರವಾದ ಸ್ವಾದಿಷ್ಟವಾಗಿದೆ. ಈ ಮೀನಿಗೆ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ಇದೆ ಎಂದು ಮೀನು ಮಾರಾಟಗಾರ ಬಲೆ ರಾಮು ತಿಳಿಸಿದ್ದಾರೆ.





