Mysore
15
overcast clouds

Social Media

ಬುಧವಾರ, 10 ಡಿಸೆಂಬರ್ 2025
Light
Dark

87ನೇ ಕನ್ನಡ ಸಾಹಿತ್ಯ ಸಮ್ಮೇಳನ: ಸಮ್ಮೇಳನಾಧ್ಯಕ್ಷರ ಮೆರವಣಿಗೆಯಲ್ಲಿ ಮೆರಗು ತಂದ ಕಲಾತಂಡಗಳು

ಮಂಡ್ಯ: 87ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರ ಮೆರವಣಿಗೆ ಅದ್ಧೂರಿಯಾಗಿ ನೆರವೇರಿದ್ದು,  ಇದರಲ್ಲಿ  ಸುಮಾರು 157 ಕಲಾತಂಡಗಳು ಭಾಗವಹಿಸಿ ಸಮ್ಮೇಳನಕ್ಕೆ ಮೆರಗು ತಂದಿವೆ.

87ನೇ ನುಡಿ ಜಾತ್ರೆಯ ಸಮ್ಮೇಳನಾಧ್ಯಕ್ಷ ಗೊ.ರು.ಚನ್ನಬಸಪ್ಪ ಅವರನ್ನು ಅರಮನೆ ದರ್ಬಾರ್‌ ಸಿಂಹಾಸನವನ್ನೊಳಗೊಂಡ ವಿಶೇಷ ರಥದ ಮೂಲಕ ಮೆರವಣಿಗೆ ನೆರವೇರಿಸಲಾಗಿದೆ. ಸಮ್ಮೇಳನಾಧ್ಯಕ್ಷರ ಮೆರವಣಿಗೆಗೆ ರಾಜ ವಂಶಸ್ಥೆ ಪ್ರಮೋದಾದೇವಿ ಒಡೆಯರ್‌ ಚಾಲನೆ ನೀಡಬೇಕಿತ್ತು. ಆದರೆ ಅವರ ಗೈರು ಹಾಜರಿಯಿಂದ ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಅವರೇ ಮೆರವಣಿಗೆ ಚಾಲನೆ ನೀಡಿದ್ದಾರೆ. ಬಳಿಕ ಮೈಸೂರು ಪೊಲೀಸ್‌ ಬ್ಯಾಂಡ್‌ ಭಾಗವಹಿಸಿರುವುದು ಈ ಮೆರವಣಿಗೆಗೆ ಇನ್ನಷ್ಟು ಹೆಚ್ಚು ಮೆರಗು ನೀಡಿದಂತಾಗಿದೆ.

ಈ ಬಾರಿಯ ಸಾಹಿತ್ಯ ಸಮ್ಮೇಳನದಲ್ಲಿ ನಂದಿಧ್ವಜ, ಚಕ್ಕಡಿಗಾಡಿ, ಕೊಂಬುಕಹಳೆ, ನಾದಸ್ವರ, ಸ್ತಬ್ಧಚಿತ್ರ, ವೀರಗಾಸೆ, ತಮಟೆ, ಕಂಸಾಳೆ, ಮಹಿಳಾ ವೀರಗಾಸೆ, ಕೀಲುಕುದುರೆ, ಜಗ್ಗಲಿಗೆ ಮೇಳ, ಪೂರ್ಣಕುಂಭ, ನಗಾರಿ, ಛತ್ರಿಚಾಮರ, ಲಿಡಕರ್ ಸ್ತಬ್ಧಚಿತ್ರ, ಖಾಸಬೇಡರಪಡೆ, ಭಾಗವಂತಿಕೆ, ಹಗಲು ವೇಷ, ಅರೆವಾದ್ಯ, ಪೆಟ್ಟಿಗೆ ಮಾರಮ್ಮ, ಕೋಲಾಟ, ಗಾರುಡಿಗೊಂಬೆ, ಕರಗ, ಚಿಲಿಪಿಲಿ ಗೊಂಬೆ, ದಾಸಪ್ಪ ಜೋಗಪ್ಪ, ಬೆಂಕಿಭರಾಟೆ, ದೊಣ್ಣೆ ವರಸೆ, ಚಿಟ್ಟಲಗಿ ಮೇಳ, ಷಹನಾಯವಾದನ, ಗಾರುಡಿ ಗೊಂಬೆ, ಯಕ್ಷಗಾನ ಗೊಂಬೆ, ವಾನರಸೇನೆ, ಕರಡಿ ಮಜಲು, ದೇವಿ ವೇಷಧಾರಿ, ಕೀಲು ಕುದುರೆ, ನೃತ್ಯ, ಮರಗಾಲು, ಮುಳ್ಳು ಕುಣಿತ, ಡೊಳ್ಳು ಕುಣಿತ, ಪೂಜಾಕುಣಿತ, ಡೊಳ್ಳು ಕುಣಿತ, ಹಾಲಕ್ಕಿ ಸುಗ್ಗಿ ಕುಣಿತ, ಪಟಕುಣಿತ, ರಂಗದಕುಣಿತ, ಮಹಿಳಾ ಡೊಳ್ಳು ಕುಣಿತ, ಸೋಮನ ಕುಣಿತ, ಗೊರವರ ಕುಣಿತ, ಲಂಬಾಣಿ ನೃತ್ಯ, ಕೋಳಿ ನೃತ್ಯ, ಕೊಡವ ನೃತ್ಯ, ಜೋಗತಿ ನೃತ್ಯ,  ವೀರಮಕ್ಕಳ ಕುಣಿತ, ಸತ್ತಿಗೆ ಕುಣಿತ,  ದಟ್ಟಿ ಕುಣಿತ,  ಹಲಗು ಕುಣಿತ, ಪಟಕುಣಿತ, ನಾಲ್ವಡಿ ಕೃಷ್ಣರಾಜ ಒಡೆಯರ್, ಕೆಂಪೇಗೌಡ, ವಿಶ್ವೇಶ್ವರಯ್ಯ ವೇಷಧಾರಿ, ಅಶ್ವಾರೋಹಿ ದಳ, ಟಾಂಗಾ ಗಾಡಿ, ಎತ್ತಿನ ಗಾಡಿ, ಸಮ್ಮೇಳನಾಧ್ಯಕ್ಷರ ಭಾವಚಿತ್ರ ಒಳಗೊಂಡ 87 ಆಟೋ ರಿಕ್ಷಾಗಳು, ಸ್ಕೌಟ್ಸ್ ಮತ್ತು ಗೈಟ್ಸ್, ಎನ್ ಸಿಸಿ, ಭಾರತ್ ಸೇವಾದಳ ತಂಡ ಸೇರಿದಂತೆ 157 ಕಲಾತಂಡಗಳು ಹಾಗೂ 2,2250 ಕಲಾವಿದರು ಮೆರವಣಿಗೆಯಲ್ಲಿ ಭಾಗವಹಿಸಿದ್ದವು.

ಹೊರರಾಜ್ಯದ ಕಲಾ ಪ್ರಕಾರಗಳು

ತಮಿಳುನಾಡಿನ ಕರಗಂ, ಒಡಿಶಾದ ಸಂಬಲ್ಪುರಿ ಮತ್ತು ಧಾಪ್ ಬುಡಕಟ್ಟು ನೃತ್ಯ, ಮಧ್ಯಪ್ರದೇಶದ ಬಧಾಯಿ ಮತ್ತು ನೋರಾ, ಕಲಾ ಪ್ರಕಾರಗಳು ಒಳಗೊಂಡಂತೆ, ನಾನಾ ಜಿಲ್ಲೆಯ ನೂರಾರು ಕಲಾತಂಡಗಳು ಸಮ್ಮೇಳನಾಧ್ಯಕ್ಷರ ಮೆರವಣಿಗೆಯಲ್ಲಿ ಸಾಗಿರುವುದು ಬಹಳ ವಿಶೇಷವಾಗಿದೆ.

Tags:
error: Content is protected !!