Mysore
27
few clouds

Social Media

ಶನಿವಾರ, 11 ಏಪ್ರಿಲ 2026
Light
Dark

ಕೆಲಸ ವಾಪಸ್‌ ಕೊಡಿಸಿ ಎಂದು ಮೊಬೈಲ್‌ ಟವರ್‌ ಏರಿ ಕುಳಿತ ವ್ಯಕ್ತಿ

ಮೈಸೂರಿನ ವರುಣ ಗ್ರಾಮದಲ್ಲಿನ ಬಿಎಸ್‌ಎನ್‌ಎಲ್‌ ಮೊಬೈಲ್‌ ಟವರ್‌ ಏರಿ ಕುಳಿತ ವ್ಯಕ್ತಿಯೋರ್ವ ತನಗೆ ಕೆಲಸ ಮಾಡುವ ಜಾಗದಲ್ಲಿ ಅನ್ಯಾಯವಾಗಿದೆ, ಹೀಗಾಗಿ ಕೆಲಸ ವಾಪಸ್‌ ಕೊಡಿಸಿ, ನ್ಯಾಯ ಸಿಗುವಂತೆ ಮಾಡಿ ಎಂದು ಬೇಡಿಕೆ ಇಟ್ಟಿರುವ ಘಟನೆ ನಡೆದಿದೆ.

ಹಾಸನದ ಶ್ರೀನಿವಾಸಪುರದಲ್ಲಿರುವ ಸಕ್ಕರೆ ಕಾರ್ಖಾನೆಯಲ್ಲಿ ಫಿಟ್ಟರ್‌ ಆಗಿ ಕೆಲಸ ನಿರ್ವಹಿಸುತ್ತಿದ್ದ ಬೀರೇಗೌಡ ಎಂಬಾತ ಈ ರೀತಿಯ ವಿಚಿತ್ರ ಧರಣಿ ನಡೆಸಿದ್ದಾನೆ. ಇನ್ನು ಟವರ್‌ ಏರಿ ಕುಳಿತ ಬೀರೇಗೌಡನ ಮನವೊಲಿಸಲು ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಹರಸಾಹಸಪಟ್ಟು ಮೂಕ ಪ್ರೇಕ್ಷಕರಾಗಿ ನಿಂತಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!