ಹನೂರು: ಮುಂದಿನ ತಿಂಗಳು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಮಲೆ ಮಹದೇಶ್ವರ ಬೆಟ್ಟಕ್ಕೆ ಆಗಮಿಸುತ್ತಿರುವ ಹಿನ್ನೆಲೆ ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಮಲೆಮಹದೇಶ್ವರ ಬೆಟ್ಟದಲ್ಲಿ ನಡೆಯುತ್ತಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆಯನ್ನು ನಡೆಸಿದರು.
ಈ ವೇಳೆ ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ಮುಖ್ಯಮಂತ್ರಿ ಆಗಮಿಸುತ್ತಿರುವುದರಿಂದ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಬೇಕು.ಪ್ರಗತಿಯಲ್ಲಿರುವ ಕಾಮಗಾರಿಯನ್ನು ಆದಷ್ಟು ಬೇಗ ಪೂರ್ಣಗೊಳಿಸಿ ಭಕ್ತರ ಅನುಕೂಲಕ್ಕೆ ಕಲ್ಪಿಸಬೇಕು. ಟೆಂಡರ್ ಪೂರ್ಣಗೊಂಡು ಕಾಮಗಾರಿ ಇನ್ನೂ ಪ್ರಾರಂಭಿಸಿದೇ ಇರುವ ಕಾಮಗಾರಿಯ ಬಗ್ಗೆ ಮಾಹಿತಿ ಪಡೆದುಕೊಂಡು ಆದಷ್ಟು ಬೇಗ ಕಾಮಗಾರಿ ಪ್ರಾರಂಭಿಸಬೇಕು. ಯಾವುದಾದರೂ ತೊಡಕುಗಳಿದ್ದರೆ ನೇರವಾಗಿ ಸಂಪರ್ಕಿಸಿ ನಿಮಗೆ ಬಂದೋಬಸ್ತ್ ಅವಶ್ಯಕತೆ ಇದ್ದರೆ ನಾನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಜತೆ ಚರ್ಚಿಸಿ ನಿಮ್ಮ ಕಾಮಗಾರಿಗೆ ಅನುವು ಮಾಡಿಕೊಡುತ್ತೇನೆ ಎಂದು ತಿಳಿಸಿದರು .
108ಅಡಿ ಮಲೆ ಮಹದೇಶ್ವರರ ಪ್ರತಿಮೆ,512 ವಸತಿಗೃಹ ಎಸ್ ಎಸ್ ಡಿಪಿ ಯುಜಿಡಿ, ತಿರುಪತಿ ಮಾದರಿಯ ದರ್ಶನದ ಸರತಿ ಸಾಲು, ಡಾರ್ಮೆಟರಿ, ಲಡ್ಡು ಮನೆ, ಕಲ್ಯಾಣಿ ಸೇರಿದಂತೆ ವಿವಿಧಡೆ ಪರಿಶೀಲನೆ ನಡೆಸಿ ಅಧಿಕಾರಿಗಳಿಂದ ಮಾಹಿತಿ ಪಡೆದರು.

ಈ ಸಂದರ್ಭದಲ್ಲಿ ಪ್ರಾಧಿಕಾರದ ಕಾರ್ಯದರ್ಶಿ ಕಾತ್ಯಾಯಿನಿ ದೇವಿ, ಇಇ ವಿನಯ್, ನಿವೃತ್ತ ಅಭಿಯಂತರ ಕುಮಾರ್ ,ಎಇಇ ಸದಾಶಿವಮೂರ್ತಿ, ಎಇ ಮಹದೇವಸ್ವಾಮಿ,ತಹಸಿಲ್ದಾರ್ ಆನಂದಯ್ಯ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.





