Mysore
20
overcast clouds

Social Media

ಶನಿವಾರ, 19 ಅಕ್ಟೋಬರ್ 2024
Light
Dark

ವಾಲ್ಮೀಕಿ ಜಾಗೃತಿ ಜಾತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ : ಪ್ರಸನ್ನಾನಂದದಪುರಿ ಸ್ವಾಮೀಜಿಗಳು ಮನವಿ

ಹನೂರು: ಮಹರ್ಷಿ ವಾಲ್ಮೀಕಿ ಜಾಗೃತಿ ಜಾತ್ರೆಗೆ ನಾಯಕ ಸಮಾಜದ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಎಂದು ಶ್ರೀ ಮಹರ್ಷಿ ವಾಲ್ಮೀಕಿ ಗುರುಪೀಠಧ್ಯಾಕ್ಷರಾದ ಶ್ರೀ ಪ್ರಸನ್ನಾನಂದದಪುರಿ ಸ್ವಾಮೀಜಿಗಳು ಮನವಿ ಮಾಡಿದರು. ಪಟ್ಟಣದ ಶ್ರೀ ಬೆಟ್ಟಳ್ಳಿ ಮಾರಮ್ಮ ಕಲ್ಯಾಣ ಮಂಟಪದ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ನಾಯಕ ಸಮುದಾಯದವರ ಸಭೆಯಲ್ಲಿ ಅವರು ಮಾತನಾಡಿದರು.

ದಾವಣಗೆರೆ ಜಿಲ್ಲೆ, ಹರಿಹರ ತಾಲೂಕು, ರಾಜನಹಳ್ಳಿ ಶ್ರೀ ಮಹರ್ಷಿ ವಾಲ್ಮೀಕಿ ಗುರುಪೀಠದಲ್ಲಿ ಪೆ.8.2.2023ರಂದು ಜರುಗಲಿರುವ ಮಹರ್ಷಿ ವಾಲ್ಮೀಕಿ ಜಾತ್ರೆ ಈ ಬಾರಿ ಹಲವು ವಿಶೇಷತೆಯಿಂದ ಕೂಡಿದೆ. ಸತತ ಹೋರಾಟದ ಫಲವಾಗಿ ಎಸ್. ಟಿ.ಸಮುದಾಯಕ್ಕೆ ಮೀಸಲಾತಿ ಹೆಚ್ಚಳ ಮಾಡಿರುವ ಸುಸಂದರ್ಭದಲ್ಲಿ ಜರುಗಲಿರುವ ಎರಡು ದಿನಗಳ ಜಾತ್ರಾ ಮಹೋತ್ಸವದಲ್ಲಿ ಶ್ರೀ ಮಠದ 25ನೇ ವರ್ಷದ ವಾರ್ಷಿಕೋತ್ಸವ, ಲಿಂಗೈಕ್ಯ ಜಗದ್ಗುರು ಶ್ರೀ ಪುಣ್ಯಾನಂದಪುರಿ ಮಹಾ ಸ್ವಾಮೀಜಿಯವರ 16ನೇ ವರ್ಷದ ಪುಣ್ಯರಾಧನೆ, ಜಗದ್ಗುರು ಶ್ರೀ ವಾಲ್ಮೀಕಿ ಪ್ರಸನ್ನಾನಂದ ಮಹಾಸ್ವಾಮಿಜಿಯವರ 15ನೇ ವರ್ಷದ ಪಟ್ಟಾಧಿಕಾರ ಮಹೋತ್ಸವದ ಜೊತೆಗೆ ನೂತನ ರಥ ಲೋಕಾರ್ಪಣೆ ಕಾರ್ಯಕ್ರಮಗಳು ಜರಗಲಿವೆ. ಈ ಹಿನ್ನಲೆಯಲ್ಲಿ ಸಮುದಾಯದ ಬಂಧುಗಳು ಆಗಮಿಸಿ ಎಂದು ಮನವಿ ಮಾಡಿದರು.

ಮೀಸಲಾತಿ ಹೆಚ್ಚಳ ಬೆಂಬಲಕ್ಕೆ ನಿಂತ ಗಣ್ಯರಿಗೆ ಅಭಿನಂದನೆ ಸಲ್ಲಿಸಿದ ಶ್ರೀಗಳು: ರಾಜ್ಯದ ನಾಯಕ ಸಮುದಾಯದ ಬೆಂಬಲ ಮತ್ತು ಹೋರಾಟದ ಫಲವಾಗಿ ಇಂದು ಎಸ್. ಟಿ. ಮೀಸಲಾತಿ ಶೇ.7 ಹೆಚ್ಚಳವಾಗಿರುವುದು ಸಮುದಾಯದ ಮಕ್ಕಳ ಶೈಕ್ಷಣಿಕ ಅಭಿೃದ್ಧಿಗೆ ಸಹಕಾರಿಯಾಗಿದೆ. ಈ ಒಂದು ಹೋರಾಟಕ್ಕೆ ಪಕ್ಷಾತೀತವಾಗಿ ಸಹಕರಿಸಿದ ಎಲ್ಲರಿಗೂ ಈಗಾಗಲೇ ಕೃತಜ್ಞತೆಯನ್ನು ಸಲ್ಲಿಸಿದ್ದೇವೆ. ಮೀಸಲಾತಿ ಹೋರಾಟದ ಯಶಸ್ವಿಗೆ ಸ್ಪಂದಿಸಿದ ಹನೂರು ತಾಲ್ಲೂಕಿನ ನಾಯಕ ಸಮುದಾಯದವರಿಗೆ ಹಾಗೂ ಈ ಭಾಗದ ಶಾಸಕ ಆರ್. ನರೇಂದ್ರ ಮತ್ತು ಮಾಜಿ ಸಂಸದ ದೃವನಾರಾಯಣ ರವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಹನೂರು ತಾಲೂಕಿನ ವಿವಿಧ ಗ್ರಾಮಗಳ ನಾಯಕ ಸಮುದಾಯದವರು ಉಪಸ್ಥಿತರಿದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ