Mysore
21
few clouds

Social Media

ಸೋಮವಾರ, 05 ಜನವರಿ 2026
Light
Dark

ಮೈಸೂರು ನಂದಿಗೆ ಕಾರ್ತಿಕದ ಮಹಾಭಿಷೇಕ

ಮೈಸೂರು: ಬೆಟ್ಟದ ಬಳಗ ಚಾರಿಬಟಲ್ ಟ್ರಸ್ಟ್ ವತಿಯಿಂದ ಭಾನುವಾರ (ನ.13) ಬೆಳಗ್ಗೆ 9.30ಕ್ಕೆ ಚಾಮುಂಡಿ ಬೆಟ್ಟದ ನಂದಿ ವಿಗ್ರಹಕ್ಕೆ ಮಹಾಭಿಷೇಕ ನೆರವೇರಿಸಲಾಯಿತು. ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಹೊಸಮಠದ ಶ್ರೀ ಚಿದಾನಂದ ಸ್ವಾಮೀಜಿ, ಆದಿಚುಂಚನಗಿರಿ ಶಾಖಾ ಮಠದ ಶ್ರೀ ಸೋಮನಾಥಾನಂದ ಸ್ವಾಮೀಜಿ ಸಮ್ಮುಖದಲ್ಲಿ ವರ್ಷಂಪ್ರತಿಯಂತೆ ಅಭಿಷೇಕ ನೆರವೇರಿಸಲಾಯಿತು. ನೂರಾರು ಭಕ್ತರು ಈ ದೃಶ್ಯವನ್ನು ಕಣ್ತುಂಬಿಕೊಂಡರು.

ಬೆಟ್ಟದ ಬಳಗ ಚಾರಿಬಟಲ್ ಟ್ರಸ್ಟ್ ಕಳೆದ ಹಲವು ವರ್ಷಗಳಿಂದ ಕಾರ್ತಿಕ ಮಾಸದ ಸಂದರ್ಭದಲ್ಲಿ ನಂದಿ ವಿಗ್ರಹಕ್ಕೆ ಮಹಾಭಿಷೇಕ ನೆರವೇರಿಸುತ್ತಾ ಬಂದಿದೆ. ಈ ವರ್ಷವೂ ಹಾಲು, ಮೊಸರು, ತುಪ್ಪ, ಜೇನು ತುಪ್ಪ, ಸಕ್ಕರೆ, ಅರಿಶಿನ, ಕುಂಕುಮ, ಸಿಂಧೂರ, ರಕ್ತಚಂದನ, ಭಷ್ಮ, ಗಂಧ, ಬಾಳೆಹಣ್ಣು, ದ್ರಾಕ್ಷಿ, ಬೆಲ್ಲ, ಖರ್ಚೂರ, ಸೌತೆಕಾಯಿ, ಕಬ್ಬಿನ ರಸ, ಎಳನೀರು, ನಿಂಬೆಹಣ್ಣು ರಸ, ತೈಲ, ಪಾಯಸ, ಗೋದಿಹಿಟ್ಟು, ಕಡ್ಲೆ ಇಟ್ಟು, ಹೆಸರಿಟ್ಟು, ದರ್ಬೆ, ಪುಷ್ಪ ಸೇರಿದಂತೆ ನಾನಾ ಬಗೆಯ ದ್ರವ್ಯಗಳಿಂದ ಅಭಿಷೇಕಗಳನ್ನು ನೆರವೇರಿಸಲಾಯಿತು.

ಅಭಿಷೇಕದ ಬಳಿಕ ಅಷ್ಟೋತ್ತರ, ಮಹಾಮಂಗಳಾರತಿ, ಸುಗಂಧ ದ್ರವ್ಯ ಸಿಂಪಡಣೆ ನೆರವೇರಿಸಲಾಯಿತು. ಟ್ರಸ್ಟ್ ಅಧ್ಯಕ್ಷ ಶಿವಕುಮಾರ್, ಕಾರ್ಯದರ್ಶಿ ಎನ್.ಗೋವಿಂದ, ಸುಂದರ್ ಮತ್ತಿತರರು ಕಾರ್ಯಕ್ರಮದ ಮುಂದಾಳತ್ವ ವಹಿಸಿದದ್ದರು.

 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!