ಮೈಸೂರು: ಮಹಾಜನ ಪ್ರಥಮ ದರ್ಜೆ ಕಾಲೇಜಿನಲ್ಲಿ ವ್ಯವಹಾರ ನಿರ್ವಹಣಾ ಶಾಸ್ತ್ರ ಹಾಗೂ ಐಕ್ಯೂಎಸಿ ವತಿಯಿಂದ ರಾಷ್ಟ್ರೀಯ ಮಟ್ಟದ ವೆಬಿನಾರ್ ನಡೆಯಿತು.
ಸಂಪನ್ಮೂಲ ವ್ಯಕ್ತಿಯಾಗಿ ಬಹುದ್ದೂರ್ ಇನ್ಸ್ಟಿಟ್ಯೂಟ್ ಆಫ್ ವ್ಯಾನೇಜ್‌ಮೆಂಟ್ ಸೈನ್ಸ್ ಯೂನಿವರ್ಸಿಟಿ ವ್ಯವಹಾರ ಆಡಳಿತ ವಿಭಾಗದ ಪ್ರಾಧ್ಯಾಪಕರಾದ ಡಾ. ಆಯಿಷಾ ಎಂ. ಶರೀಫ್ ಮಾತನಾಡಿ, ಇಂದಿನ ಮತ್ತು ನಾಳಿನ ವ್ಯವಹಾರದಲ್ಲಿ ಜ್ಞಾನವು ಪ್ರಮುಖ ಪಾತ್ರವಹಿಸಲಿದೆ. ಸಂಸ್ಥೆಯನ್ನು ಪುನಾರಚಿಸುವ ಮತ್ತು ಮಾನವ ಸಂಪನ್ಮೂಲಗಳ ಪುನರ್ ನಿಯೋಜನೆ ಜ್ಞಾನವು ಇತರೆ ಸಂಸ್ಥೆಗಳಿಗಿಂತ ಸ್ಪರ್ಧಾತ್ಮಕ ಅಂಚನ್ನು ಪಡೆಯಲು ಪ್ರಮುಖವಾಗಿದೆ ಎಂದು ಹೇಳಿದರು.
ಹೊಸ ಜನರ ಆರ್ಥಿಕತೆ, ಸಂಘಟನೆ ಮತ್ತು ನಿರ್ವಹಣೆುಂ ಕಲ್ಪನೆಯನ್ನು ವಿವರಿಸಿದ ಅವರು ಕಾರ್ಪೊರೇಟ್ ಜ್ಞಾನದ ಮಹತ್ವವನ್ನು ಅರಿತುಕೊಳ್ಳಲು ಪ್ರಾರಂಭಿಸಿದೆ. ಇಂದಿನ ವೃತ್ತಿಪರರು ಹೆಚ್ಚು ಬೇಡಿಕೆಯಲ್ಲಿದ್ದಾರೆ, ಜನರು ಸಂಸ್ಥೆಯ ಪ್ರಮುಖ ಸಾಧನವಾಗಿದ್ದಾರೆ ಮತ್ತು ಆದ್ದರಿಂದ ಗ್ರಾಹಕರ ಅಗತ್ಯತೆಗಳ ಜ್ಞಾನ, ಉತ್ಪಾದನೆ ಮತ್ತು ಜನರ ನಡುವಿನ ಸಂಬಂಧ, ವ್ಯವಹಾರ ಪ್ರಕ್ರಿಯೆ ಮರು-ಎಂಜಿನಿಯರಿಂಗ್ ಬಹಳ ಅವಶ್ಯಕ ಎಂದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಬಿ.ಆರ್. ಜುಂಕುಮಾರಿ, ವ್ಯವಹಾರ ನಿರ್ವಹಣಾ ಶಾಸ್ತ್ರದ ಮುಖ್ಯಸ್ಥರಾದ ಎಸ್.ಶೈಲಾ, ಸಂಯೋಜಕ ಎನ್.ಸುನಿಲ್ ಸ್ವಾಗತಿಸಿದರು. ವೆಬಿನಾರ್‌ನಲ್ಲಿ ಭಾರತದ್ಯಾಂತ ಸುಮಾರು ೩೦೦ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು.